ದಸರಾ ಆನೆಗಳು, ಮಾವುತರು, ಸಿಬ್ಬಂದಿಗಳಿಗೆ ವಿಮೆ

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಆನೆಗಳು, ಮಾವುತರು, ಕಾವಾಡಿಗಳು ಹಾಗೂ ಉಸ್ತುವಾರಿ ಸಿಬ್ಬಂದಿಗೆ ಮುಂಜಾಗ್ರತಾ ಕ್ರಮವಾಗಿ ವಿಮೆಯನ್ನು ಮಾಡಿಸಲಾಗಿದೆ.

ಈ ಬಾರಿ 14 ಆನೆಗಳು, 14 ಮಂದಿ ಮಾವುತರು,14 ಮಂದಿ ಕಾವಾಡಿಗಳು, ಆರು ಮಂದಿ ವಿಶೇಷ ಮಾವತರು, ಆರ್ ಎಫ್ ಒ ಡಿ ಆರ್ ಎಫ್ ಒ, ಪಶುವೈದ್ಯ ಸಹಾಯಕರು ಮತ್ತು ಆನೆಗಳ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿ, ಆಸ್ತಿ ಹಾಗೂ ಆಸ್ತಿ ಹಾನಿಗೂ ವಿಮೆ ಮಾಡಿಸಲಾಗಿದೆ.

ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯಿಂದ ಪಾಲಿಸಿ ಮಾಡಲಾಗಿದ್ದು, ಅಂದಾಜು 2.02 ಕೋಟಿ ಮಟ್ಟದ ವಿಮೆಯನ್ನು ಮಾಡಿಸಲಾಗಿದೆ.

ಸೆಪ್ಟೆಂಬರ್ ಒಂದರಿಂದ ಈ ಪಾಲಿಸಿಗಳು ಬರುವ ಅಕ್ಟೋಬರ್ ಕೊನೆಯ ವರೆಗೆ ವಿಮೆಯ ಅವಧಿಯಾಗಿರುತ್ತದೆ.

ಈ ಬಾರಿ ದಸರಾ ಮಹೋತ್ಸವದಲ್ಲಿ ಗಂಡಾನೆ ಗಳಿಗೆ 5 ಲಕ್ಷ ಹಾಗೂ ಹೆಣ್ಣಾಣೆಗಳಿಗೆ 4.50 ಲಕ್ಷ ರೂ ವಿಮೆಯನ್ನು ಮಾಡಿಸಲಾಗಿದೆ.

ಆಸ್ತಿ ಹಾನಿಗಾಗಿ 50 ಲಕ್ಷ ರೂ., ಮಾವುತ, ಕಾವಾಡಿ, ವಿಶೇಷ ಮಾವತರು, ಆಹಾರ ತಯಾರಿಸುವ ಸಿಬ್ಬಂದಿ, ಮೇಲುಸ್ತುವಾರಿ ಸಿಬ್ಬಂದಿ ಸೇರಿದಂತೆ 42 ಮಂದಿಗೆ ತಲಾ ಎರಡು ಲಕ್ಷ ರೂ ನಂತೆ 84 ಲಕ್ಷ ರೂ. ವಿಮೆ ಮಾಡಿಸಲಾಗಿದೆ.