ನಮ್ಮ ಮಾತೃಭಾಷೆ ಕನ್ನಡವನ್ನು ಕಾಪಾಡಿಕೊಳ್ಳದಿದ್ದರೆ ಕೈತಪ್ಪಿ ಹೋಗುತ್ತದೆ:ಹಂಸಲೇಖ ಆತಂಕ

ಮೈಸೂರು: ನಮ್ಮ ಮಾತೃಭಾಷೆ ಕನ್ನಡವನ್ನು ಕಾಪಾಡಿಕೊಳ್ಳದಿದ್ದರೆ ಕೈತಪ್ಪಿ ಹೋಗುತ್ತದೆ ಎಂದು ಹಿರಿಯ ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖ ಆತಂಕ ವ್ಯಕ್ತಪಡಿಸಿದರು.

ಈ‌ ಬಾರಿಯ ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಅವರೊಂದಿಗೆ
ಮೈಸೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು.

ಕನ್ನಡವನ್ನು ನಾಡಿನ ನಾವೆಲ್ಲರೂ ಕಾಪಾಡಿಕೊಳ್ಳಬೇಕು ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಕನ್ನಡದ ಮನಸ್ಸುಗಳು ಒಂದಾಗಬೇಕು,ಕನ್ನಡ ಒಂದಂಶ ಕಾರ್ಯಕ್ರಮ ಆಗಬೇಕು.ಇದು ಇಡೀ ನಾಡಿಗೆ ಸಲ್ಲಬೇಕು ಎಂದು ತಿಳಿಸಿದರು.

ಹಿಂದಿ ಹೇರಿಕೆ ಇವತ್ತಿನ ಪಿಡುಗಲ್ಲ ಹಿಂದಿನಿಂದ ಬಂದ ಪಿಡುಗಾಗಿದೆ.‌ ಅದು ಉತ್ತರ ಭಾರತದವರ ಆಸೆಯಾಗಿದೆ‌. ದೆಹಲಿಯವರಿಗೆ ಕನ್ನಡ ಬೇಕಿಲ್ಲ. ನಮಗೆ ಹಿಂದಿ ಬೇಕಾಗಿಲ್ಲ ಎಂದು ಹಂಸಲೇಖ ಕಡಕ್ಕಾಗಿ ಹೇಳಿದರು.

ದಸರಾ ಉದ್ಘಾನೆಗೆ ತಮ್ಮನ್ನು ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,
ಸಾಮಾಜಿಕ ಕಲಾ ನ್ಯಾಯದಿಂದ ನನಗೆ ದಸರಾ ಉದ್ಘಾಟನೆಯ ಅವಕಾಶ ದೊರೆತಿದೆ ಎಂದು ತಿಳಿಸಿದರು.

ಬೇರೆ ಯಾವ ಉದ್ದೇಶದಿಂದಲೂ ನನಗೆ ಉದ್ಘಾಟನೆಯ ಅವಕಾಶ ದೊರೆತಿಲ್ಲ. ಕಲಾ ನ್ಯಾಯದಿಂದ ನನಗೆ ಅವಕಾಶ ದೊರೆತಿದೆ. ಗೊರೂರು ಚೆನ್ನಬಸಪ್ಪ, ರಾಜೀವ್ ತಾರಾನಾಥ್ ಅವರನ್ನು ಆಯ್ಕೆ ಮಾಡುವಂತೆ ಹೇಳಿದ್ದೆ. ಆದರೂ ಸಿಎಂ ಸಿದ್ದರಾಮಯ್ಯ ಅವರು ಇಂತಹ ಅವಕಾಶ ನೀಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನನಗೆ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ನಾಲ್ವಡಿ ಅವರಿಗೆ ಇಂದಿನ ಅವಕಾಶ ಸಂದತೆ ಆಗುತ್ತದೆ. ನಾನು ಕಲಾ ಪ್ರತಿನಿಧಿ ಯಾಗಿ ಇಲ್ಲಿಗೆ ಬಂದಿದ್ದೇನೆ ಎಂದು ನಾದಬ್ರಹ್ಮ ತಿಳಿಸಿದರು.

ಮೈಸೂರು ಸ್ಮಾರ್ಟ್ ಸಿಟಿ ಬದಲಿಗೆ
ಸ್ಮಾರ್ಟ್ ವಿಲೀಜ್ ಮಾಡಬೇಕು.ಆ ಮಟ್ಟಕ್ಕೆ ವಿನ್ಯಾಸ ಮಾಡಿರುತ್ತಾರೆ. ಎಲ್ಲದರ ಮೂಲ ರೈತರೇ ಆಗಿದ್ದಾರಲ್ಲವಾ ಎಂದರು.