ಮೈಸೂರು: ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಗಣಪ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಉಚಿತವಾಗಿ ಮಣ್ಣಿನ ಗಣಪ ಮತ್ತು ಮಣ್ಣಿನ ಗೌರಿ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು
ಮೈಸೂರಿನ ಚಾಮುಂಡಿಪುರಂನ ಬಾಲಬೋದಿನಿ ಶಾಲೆಯಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಶಾಲೆಯ ಪುಟಾಣಿಗಳಿಗೆ ಉಚಿತವಾಗಿ ಮಣ್ಣಿನ ಗೌರಿ ಗಣಪ ವಿತರಿಸಿ ಜಾಗೃತಿ ಮೂಡಿಸಲಾಯಿತು.
ಪಿಒಪಿ ಗೌರಿ,ಗಣಪನ ಮೂರ್ತಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ, ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಬಳಸುವ ಮೂಲಕ ನಗರದ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಸಹಕರಿಸಬೇಕು ಎಂದು ಅಪೂರ್ವ ಸ್ನೇಹ ಬಳಗದವರು ಮನವಿ ಮಾಡಿದರು.
ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನಗಣಪತಿ ಮೂರ್ತಿ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನಿಯ
ಎಂದು ಪರಿಸರ ಪ್ರೇಮಿ ಬೈರತಿ ಲಿಂಗರಾಜು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ವಿಭಾಗ
ಸಂಯೋಜಕಿ ಸವಿತಾ ಘಾಟ್ಕೆ
ಗಣಪನ ಮೂರ್ತಿಯನ್ನು ನೀರಿಗೆ ಬಿಟ್ಟಾಗ ಅದರಲ್ಲಿನ ಬಣ್ಣ ಜಲಚರಗಳ ಸಾವಿಗೆ ಕಾರಣವಾಗುತ್ತದೆ ಹೀಗಾಗಿ ಮಣ್ಣಿನ ಗಣಪ ಬಳಸುವುದು ಕ್ಷೇಮ ಎಂದು ಮನವಿ ಮಾಡಿದರು.
ಉದ್ಯಮಿ ಜಯರಾಮ್, ಪರಿಸರ ಪ್ರೇಮಿ ದೂರ ರಾಜಣ್ಣ, ಅಪೂರ್ವ ಸುರೇಶ್, ಆನಂದ್, ರವಿ, ಶಾಲೆಯ ಮುಖ್ಯ ಶಿಕ್ಷಕರಾದ ಜಯಂತಿ ಸಿ, ಶಿಕ್ಷಕರಾದ ಲತಾ ಕುಮಾರಿ, ಮೌಸಿನ್ ತಾಜ್, ಲೀಲಾವತಿ ಮತ್ತಿತರರು ಭಾಗವಹಿಸಿದ್ದರು.