ಕೃಷ್ಣರಾಜ ಕ್ಷೇತ್ರದ ಮೇದರ ಕೇರಿಯಲ್ಲಿ ಶಾಸಕ ಶ್ರೀವತ್ಸ ಪಾದಯಾತ್ರೆ

ಮೈಸೂರು: ಕೃಷ್ಣ ರಾಜ ಕ್ಷೇತ್ರದ ವಾರ್ಡ್ ನಂಬರ್ 55 ರ ವ್ಯಾಪ್ತಿಯ ಮೇದರ ಕೇರಿ ಭಾಗದಲ್ಲಿ ಟಿ.ಎಸ್‌. ಶಾಸಕ ಶ್ರೀವತ್ಸ ಅವರು ಪಾದಯಾತ್ರೆ ಮಾಡಿ ಜನರ ಸಮಸ್ಯೆ ಆಲಿಸಿದರು.

ಪಾದಚಾರಿ ರಸ್ತೆ ಸೇರಿದಂತೆ ಕೆಲವು ಕಾಮಗಾರಿಗಳನ್ನು ವೀಕ್ಷಿಸಿದರು.

ಇದೇ‌ ವೇಳೆ ಶಾಸಕರು ಆಟೋ ಚಾಲಕರನ್ನು ಮಾತನಾಡಿಸಿದರು.ಆಗ ಕೆಲವು ಸಮಸ್ಯೆಗಳನ್ನು ಚಾಲಕರು ತೋಡಿಕೊಂಡರು.

ಶಾಸಕ ಶ್ರೀವತ್ಸ ಅವರೊಂದಿಗೆ ನಗರಪಾಲಿಕೆ ಸದಸ್ಯರರಾದ ಮಾ.ವಿ.ರಾಮ ಪ್ರಸಾದ್, ಮಾಜಿ ಸದಸ್ಯರಾದ ರಘು ಅರಸ್,,ಸಂದೀಪ್,ಪುರುಷೋತ್ತಮ,ಜೋಗಿ ಮಂಜು, ಪ್ರದೀಪ್, ಕಿಶೋರ್, ಉಮಾಶಂಕರ್,ಕಿರಣ್,ಹರ್ಷ,ಮೋಹನ್, ಧರ್ಮೇಂದ್ರ, ಹಾಗೂ ಅಧಿಕಾರಿಗಳು ಹಾಜರಿದ್ದರು.