ಮೈಸೂರು: ಡಾಕ್ಟರ್ ವಿಷ್ಣು ಸೇನಾ ಸಮಿತಿ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ವಿಷ್ಣುವರ್ಧನ್ ಉದ್ಯಾನವನ ಮುಂಭಾಗ ಸಾಹಸಸಿಂಹ ವಿಷ್ಣುವರ್ಧನ್ ರವರ 73ನೇ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಡಾಕ್ಟರ್ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದರು.
ಈ ಕರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ಮಾತನಾಡಿ ನಿನ್ನೆಯಷ್ಟೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 73 ನೆ ಜನ್ಮ ದಿನ ಆಚರಿಸಿದ್ದೇವೆ.ಇಂದು ನಾಡು ಕಂಡ ಅದ್ಭು ಕಲಾವಿದ ಡಾಕ್ಟರ್ ವಿಷ್ಣುವರ್ಧನ್ ಅವರ 73ನೆ ಹುಟ್ಟು ಹಬ್ಬ ಆಚರಿಸಿದ್ದೇವೆ ಇದು ಅತ್ಯಂತ ಸಂತಸದ ವಿಷಯ ಎಂದು ತಿಳಿಸಿದರು.
ಮೈಸೂರಿನವರಾದ ವಿಷ್ಣುವರ್ಧನ್ ಅವರಿಗೂ ಮೈಸೂರಿಗೂ ಅವಿನಾಭಾವ ಸಂಬಂಧ ಇದೆ.ಅವರು ಇಲ್ಲೇ ಗೋಪಾಲಸ್ವಾಮಿ ಶಿಶುವಿಹಾರದಲ್ಲೇ ಓದಿದವರು ಎಂಬುದು ಸಂತಸದ ವಿಷಯ ಎಂದು ಹೇಳಿದರು.
ಅವರ ಬಹುತೇಕ ಚಿತ್ರಗಳು ಮೈಸೂರಿನಲ್ಲೇ ಚಿತ್ರೀಕರಣವಾಗಿದೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಿದರು.
ನಾಗರಹಾವು ಚಿತ್ರದ ಅಶ್ಚಥ್ ಮತ್ತು ವಿಷ್ಣುವರ್ಧನ್ ರವರ ಗುರುಶಿಷ್ಯರ ಪಾತ್ರ, ಗುರುಹಿರಿಯರಿಗೆ ಗೌರವ, ಸಂಸ್ಕಾರ ಕೊಡುವ ನಟನೆ ಲಕ್ಷಾಂತರ ಕಲಾಭಿಮಾನಿಗಳ ಮನಗೆದ್ದಿತು ಎಂದು ಶ್ರೀವತ್ಸ ಸ್ಮರಿಸಿದರು.
ವಿಷ್ಣುವರ್ಧನ್ ಅವರು ಇಲ್ಲೇ ಹುಟ್ಟಿ ಬೆಳೆದವರು. ಕೊನೆಯ ಚಿತ್ರ ನಿರ್ಮಾಣ ಆಪ್ತರಕ್ಷಕ ಮೈಸೂರಿನಲ್ಲೆ ಆಯಿತು ಅವರಿಗೆ ಇಷ್ಟವಾದ ಮೈಸೂರಿನಲ್ಲೇ ಕೊನೆಯುಸಿರೆಳೆದರು ಎಂದು ತಿಳಿಸಿದರು.
ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲೇ ಆಗುತ್ತಿರುವ ಈ ಸುಸಂದರಗಭದಲ್ಲಿ ಅವರ 73 ನೆ ಜನ್ಮದಿನಾವರಣೆಯನ್ನ ನಾವು ಆಚಿರಿಸುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ವಿಷ್ಣುವರ್ಧನ್ ಅವರ ಜನ್ಮದಿನಾಚರಣೆ ಆಚರಿಸಿದ ಪಾರ್ಥಸಾರಥಿ ಹಾಗೂ ಎಲ್ಲ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶ್ರೀವತ್ಸ ನುಡಿದರು.
ಇದೇ ಸಂದರ್ಭದಲ್ಲಿ ಶ್ರೀನಿವಾಸ್ ಕಲಾತಂಡದಿಂದ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯಿಸಿರುವ ಚಿತ್ರಗೀತೆಯ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ಎಂ. ಡಿ ಪಾರ್ಥಸಾರಥಿ,ಮುಬಾರಕ್, ವಾಲೆ ಕುಮಾರ್, ಮಹದೇವ್, ಜಬಿ, ಬಸವಣ್ಣ, ಎಸ್ ಎನ್ ರಾಜೇಶ್, ವಿನಯ್ ಕಣಗಾಲ್, ಜೋಗಿ ಮಂಜು, ಪ್ರದೀಪ್, ಸುರೇಶ್ ಗೋಲ್ಡ್, ಹರೀಶ್ ನಾಯ್ಡು, ಸಂತೋಷ್ ನವೀನ್, ಸೇರಿದಂತೆ ನೂರಾರು ಅಭಿಮಾನಿಗಳು ಪಾಲ್ಗೊಂಡು ಸಂಭ್ರಮಿಸಿದರು.