ಮೈಸೂರು: ಮೈಸೂರಿನಲ್ಲಿ ಹಿಂದೂ ಮುಸ್ಲಿಂ ಯುವಕರು ಒಟ್ಟಾಗಿ ಗೌರಿ ಗಣೇಶನ ಹಬ್ಬವನ್ನು ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.
ಇದಕ್ಕೆ ಕಾರಣರಾದವರು ಶ್ರೀ ಗಣಪತಿ ಯುವಕರ ಸಂಘದ ಪದಾಧಿಕಾರಿಗಳು.
ಅಗ್ರಹಾರದ ಕುಂದೂರು ಮಠದ ರಸ್ತೆಯಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದರು.
ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಸಿಹಿ ತಿನಿಸಿ ಹಿಂದೂ ಮುಸ್ಲಿಂ ಭಾಯಿ,ಭಾಯಿ ಎಂಬ ಸಂದೇಶವನ್ನು ಸಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ನಮ್ಮ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುತ್ತೇವೆ, ಈ ಬಾರಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಸಮೀಪ ಬಂದಿದ್ದು ಉಭಯ ಸಮಾಜದ ಬಾಂಧವರು ಈ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡುವಂತೆ ಕರೆ ನೀಡಿದರು.
ಶ್ರೀ ಗಣಪತಿ ಯುವಕರ ಸಂಘದ ಮುಖ್ಯ ಸಂಚಾಲಕ ಮೋಹನ್ ಕುಮಾರ್ ಗೌಡ ಮಾತನಡಿ ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ.
ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದ್ದು, ಎರಡೂ ಸಮುದಾಯದ ಮುಖಂಡರು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಸೌಹಾರ್ದ ತೆಯಿಂದ ಹಬ್ಬಗಳನ್ನು ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ , ಮೋಹನ್ ಕುಮಾರ್ ಗೌಡ,ಸಗೀರ್ ಅಹಮದ್, ಅಪ್ರೋಜ್ ಖಾನ್, ಸಾಹೇದ್ ಮುಗುದುಮ್, ನೂರ್ ಶರೀಫ್, ಸೈಯದ್ ಫಾಸಿಲ್, ಖಾಲಿದ್ ಅಹಮದ್, ನಾಗೇಂದ್ರ, ನಿಹಾಲ್, ಭುವನ್,ಪೈ.ವಿಶೃತ್.ಎಸ್,ಗೌಡ, ರಕ್ಷಿತ್, ಯಶಸ್.ಎಸ್.ಗೌಡ ಮತ್ತಿತರರು ಪಾಲ್ಗೊಂಡಿದ್ದರು.