ದಸರಾ ಕ್ರೀಡಾಕೂಟ ದಲ್ಲಿ ಭಾಗವಹಿಸುವುದೆ ಶ್ರೇಷ್ಠ-ಶಾಸಕ ಟಿ.ಎಸ್.ಶ್ರೀ ವತ್ಸ

ಮೈಸೂರು: ದಸರಾ ಕ್ರೀಡಾಕೂಟದಲ್ಲಿ ಬಾಗವಹಿಸುವುದೆ ಶ್ರೇಷ್ಠ‌ ಎಂದು ‌ಶಾಸಕ ಡಿ.ಎಸ್.ಶ್ರೀವತ್ಸ ತಿಳಿಸಿದರು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಇಲಾಖೆ ಅಯೋಜಿರುವ ಮೈಸೂರು ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸುಮಾರು ಮೈಸೂರು ಜಿಲ್ಲೆಯ ತಾಲ್ಲೂಕಿನಲ್ಲಿ 300 ಕ್ರೀಡಾಪಟುಗಳು ಭಾಗಹಿಸಿರುವುದು ಅದರಲ್ಲೂ ಹೆಚ್ಚು ಮಹಿಳೆಯರ ಬಾಗವಹಿಸಿರುವುದು ಸಂತೋಷ ಎಂದು ಹೇಳಿದರು.

ಕ್ರೀಡೆಯನ್ನು ಕ್ರಿಡೆಯಾಗಿಯೆ ಸ್ವಿಕರಿಸಬೇಕು ಸೋಲು ಗೆಲುವು ಇರುತ್ತದೆ,ಇದರ ಜೊತೆಗೆ ಓದುವುದರ ಕಡೆಯೂ ಹೆಚ್ಚು ಗಮನ ಕೊಡಬೇಕು, ದೈಹಿಕವಾಗಿ ನೀವು ಸಮರ್ಥರಾಗಿ ಬೇರೆಯವರಿಗೂ ಪ್ರೇರಣೆ ಯಾಗಬೇಕು ಎಂದು ಶಾಸಕರು ಸಲಹೆ ನೀಡಿದರು.

ದಸರಾ ಸಂಧರ್ಭದಲ್ಲಿ ನಡೆಯುವ ಕ್ರೀಡಾಕೂಟ ಯಾವುದೆ ಲೋಪದೋಷಗಳು ಆಗದಂತೆ ಅಧಿಕಾರಿಗಳು ಹೆಚ್ವು ಗಮನ ವಹಿಸಿ ಈ ಬಾರಿಯ ಸರಳ ದಸರಾ ಯಶಸ್ವಿಗೆ ಸಹಕಾರ ಕೊಡಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಮಹಾಪೌರರಾದ ಶಿವಕುಮಾರ್, ಉಪ ಮಹಾ ಪೌರರಾದ ರೂಪ ಯೋಗೆಶ್, ಯುವ ಜನ ಕ್ರಿಡಾ ಇಲಾಖೆ ನಿರ್ದೇಶಕ
ಭಾಸ್ಕರ್ ನಾಯಕ್ ಹಾಜರಿದ್ದರು.