ಮೈಸೂರು: ಗ್ರಾಮಸ್ಥರು ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಸಾಂಕ್ರಾಮಿಕ ರೋಗದಿಂದ ದೂರ ಇದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಚ್. ಆರ್ ದೀಪ ಸಲಹೆ ನೀಡಿದರು
ಭಾರತ ಹಾಗೂ ರಾಜ್ಯ ಸರ್ಕಾರದ ವತಿಯಿಂದ ನಡೆಯುತ್ತಿರುವ ಸ್ವಚ್ಛ ಭಾರತ್ ಮಿಷಿನ್ ಸೀಸನ್ 2 ಅಭಿಯಾನದಡಿ ಕಡಕೋಳ ಪಟ್ಟಣ ಪಂಚಾಯತ್ ವತಿಯಿಂದ ಉತ್ತನಹಳ್ಳಿ ದೇವಸ್ಥಾನ ಸುತ್ತಮುತ್ತ ಸ್ವಚ್ಛಗೊಳಿಸುವ ಮುಖಾಂತರ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಮನೆಯಲ್ಲಿ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಇಟ್ಟು ಕಸ ವಿಲೇವಾರಿ ವಾಹನಕ್ಕೆ ಹಾಕಬೇಕು, ಕಸವನ್ನು ಬೀದಿಗೆ ಹಾಕದೆ ಸ್ವಚ್ಛತೆ ಕಾಪಾಡುವುದರ ಜೊತೆಗೆ ಸಾಂಕ್ರಮಿಕ ರೋಗಗಳು ಹರಡದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಮುದಾಯ ಸಂಘಟನಾಧಿಕಾರಿ ಶಂಕರ್ , ಮಹೇಶ್ ,ಆರೋಗ್ಯ ನಿರೀಕ್ಷಕ ರಾದ ಮಂಜುನಾಥ್, ಲೆಕ್ಕಿಗರಾದ ಸತೀಶ್ ,ಕಿರಿಯ ಅಭಿಯಂತರರಾದ ರಾಮಚಂದ್ರ ,ಲೋಕೇಶ್, ಹಾಗೂ ಪೌರಕಾರ್ಮಿಕರು ಕಚೇರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು