ಕೇರಳಾಕ್ಕೆ ಸಾಗಿಸಲಾಗುತ್ತಿದ್ದ 100 ಕ್ಕೂ ಹೆಚ್ಚು ರಾಸುಗಳ ರಕ್ಷಣೆ

ಮೈಸೂರು: ಕೇರಳಾ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 100ಕ್ಕೂ ಹೆಚ್ಚು ರಾಸುಗಳನ್ನ ಅಂತರಸಂತೆ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆಯಲ್ಲಿ ರಾಸುಗಳನ್ನು ರಕ್ಷಿಸಲಾಗಿದೆ.

2 ಕಂಟೈನರ್ ಹಾಗೂ 5 ಬೊಲೆರೋ ವಾಹನಗಳಲ್ಲಿ ಹಸುಗಳನ್ನು ಸಾಗಿಸು
ತ್ತಿದ್ದ ವೇಳೆ ಅಂತರಸಂತೆ ಪೊಲೀಸರು ದಾಳಿ ನಡೆಸಿದ್ದಾರೆ.

ಬ್ಯಾರಿಕೇಡ್ ಗಳನ್ನ ಅಳವಡಿಸಿ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿದರೂ ಆರೋಪಿಗಳು ಪರಾರಿ ಆಗಲು ಯತ್ನಿಸಿದ್ದಾರೆ ಆದರೂ ಪೊಲೀಸರು ಸಿನಮೀಯ ರೀತಿಯಲ್ಲಿ ಚೇಸ್ ಮಾಡಿ ವಾಹನಗಳನ್ನ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಈದ್ ಮಿಲಾದ್ ಹಬ್ಬ ಹಿನ್ನಲೆ ರಾಸುಗಳನ್ನ ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಹಸು, ಎಮ್ಮೆ, ಕರುಗಳು ಸೇರಿದಂತೆ ನೂರಾರು ರಾಸುಗಳನ್ನ ರಕ್ಷಿಸಲಾಗಿದೆ.
ಕೆಲವು ಹಸು ಹಾಗೂ ಎಮ್ಮೆಗಳು ನಿತ್ರಾಣಗೊಂಡ ಪರಿಸ್ಥಿತಿಯಲ್ಲಿ ಕಂಡು ಬಂದಿವೆ.

ರಾಸುಗಳನ್ನ ಮೈಸೂರಿನ ಪಿಂಜರಾ ಪೋಲ್ ಗೆ ರವಾನಿಸಲಾಗಿದೆ.