ಚಾಮರಾಜನಗರ: ಜಾತ್ಯಾತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ಕೋಮುವಾದಿ ಪಕ್ಷದ ಜೊತೆ ಮೈತ್ರಿ ಮಡಿಕೊಂಡು ಜಾತ್ಯಾತೀತವಾಗಿ ಉಳಿದಿದೆಯೇ ಎಂದು
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಜೆಡಿಎಸ್ ಅವರು ಬಿಜೆಪಿ ಜೊತೆ ಅಥವಾ ಇನ್ನಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೂ ನಮಗೆ ಯಾವುದೇ ತಕರಾರಿಲ್ಲ ಎಂದು ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನವರು ಯಾರ ಜೊತೆಗಾದರೂ ಮೈತ್ರಿ ಮಾಡಿಕೊಳ್ಳಲಿ ಎಂದರು.
ಜೆಡಿಎಸ್ , ಬಿಜೆಪಿಯ ಬಿ ಟೀಂ ಆಗಿದ್ದಿದ್ದರೆ 5 ವರ್ಷ ತಾವೇ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂಬ ಎಚ್ ಡಿ ಕೆ ಹೇಳಿಕೆಗೆ ಪ್ರತಿಕ್ರಿಯಿಸಿ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಕೊಂಡಿರುವ ಜೆಡಿಎಸ್ ಅನ್ನು ಏನೆಂದು ಕರೆಯಬೇಕು,
ಜೆಡಿಎಸ್ – ಜಾತ್ಯಾತೀತ ಎಂದು ಹೇಳಿಕೊಳ್ಳದಿರುವುದು ಒಳ್ಳೆಯದು ಎಂದರು
2004 ರಲ್ಲಿ ನೀವು ಬಿಜೆಪಿಯ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿದ್ದಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಅಡ್ವಾಣಿಯವರು ಹಿಂದೆ ಜನತಾ ಪಕ್ಷದಲ್ಲಿದ್ದಾಗ ಅವರನ್ನು ಭೇಟಿ ಮಾಡಿದ್ದು ನಿಜ ಎಂದು ತಿಳಿಸಿದರು.