ಮೈಸೂರು: ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡಿನ ಕಪಿಲಾ ನದಿಯಲ್ಲಿ ಉಡುಪಿ ಪೇಜಾವರ ಶ್ರೀಪಾದಂಗಳು ಸೀಮೋಲ್ಲಂಘನ ಮಾಡಿ ನಂಜುಂಡೇಶ್ವರನ ದರ್ಶನ ಪಡೆದು 36ನೇ ಚಾತುರ್ಮಾಸ್ಯ ವ್ರತವನ್ನು
ಸಂಪನ್ನಗೊಳಿಸಿದರು.
ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದ ರನ್ನು ಶುಕ್ರವಾರ ಮಧ್ಯಾಹ್ನ ಮೈಸೂರಿನಲ್ಲಿ ಭಕ್ತ ಜನತೆ ಭಾವುಕರಾಗಿ ಬೀಳ್ಕೊಟ್ಟರು.
ಬಳಿಕ ಶ್ರೀಗಳು ಸಂಜೆ ನಂಜನಗೂಡಿಗೆ ತೆರಳಿ ಕಪಿಲಾ ನದಿತೀರದಲ್ಲಿ ನದಿಗೆ ಹಾಲು ಅರಶಿನ ಕುಂಕುಮ ಪುಷ್ಪ ಸಹಿತ ಬಾಗಿನ ಅರ್ಪಿಸಿ ಮಂಗಳಾರತಿ ಬೆಳಗಿದರು.
ಅನಂತರ ಪುಷ್ಪಾಲಂಕೃತ ತೆಪ್ಪದಲ್ಲಿ ಕುಳಿತು ನದಿಯ ಆ ಕಡೆಯ ದಡವನ್ನು ತಲುಪಿ ಸೀಮೋಲ್ಲಂಘನ ವಿಧಿ ಪೊರೈಸಿದರು.
ನಂತರ ನಂಜನಗೂಡು ಶ್ರೀರಾಘವೇಂದ್ರ ಮಠಕ್ಕೂ ತೆರಳಿ ಗುರುರಾಯರ ಮೃತ್ತಿಕಾ ವೃಂದಾವನ ದರ್ಶನಗೈದರು.ಲ ಇದರೊಂದಿಗೆ ಶ್ರೀಗಳ ಈ ಬಾರಿಯ ಚಾತುರ್ಮಾಸ್ಯ ವ್ರತ ಅಧಿಕೃತವಾಗಿ ಸಮಾಪನಗೊಂಡಿತು.