ಆನೆ ಅನುಮಾನಾಸ್ಪದ‌ ಸಾವು

ಮೈಸೂರು: ರೈತನ ಜಮೀನಿನಲ್ಲಿ ಆನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ

ಸರಗೂರು ತಾಲ್ಲೂಕಿನಲ್ಲಿ ನಡೆದಿದೆ.

ತಾಲೂಕಿನ ಕೊತ್ತೆಗಾಲ ಗ್ರಾಮದ ರೈತ ನಾಗಪ್ಪ ಅವರ ಜಮೀನಿನಲ್ಲಿ ಆನೆ ಮೃತದೇಹ ಪತ್ತೆಯಾಗಿದೆ.

ಸುಮಾರ 20 ವರ್ಷದ ಗಂಡಾನೆ ಇದಾಗಿದ್ದು, ಒಂದೇ ದಂತವನ್ನು ಹೊಂದಿದೆ.

ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆನೆಗೆ ಇದ್ದದ್ದೇ ಒಂದು ದಂತವೋ ಅಥವಾ ದಂತಕ್ಕಾಗಿ ಆನೆಯನ್ನು ಕೊಂದು ಇಲ್ಲಿ ಜಮೀನಿನಲ್ಲಿ ಬಿಸಾಡಿ ಹೋಗಿದ್ದಾರೋ ಇಲ್ಲಾ ಕಾಯಿಲೆಯಿಂದ ಸಾವನ್ನಪ್ಪಿದೆಯೊ ಎಂಬುದು ವೈದ್ಯರ ವರದಿಯಿಂದ ತಿಳಿಯಬೇಕಿದೆ.