ಮೈಸೂರು: ನೇಣು ಹಾಕಿಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕೆ.ಆರ್.ಮೊಹಲ್ಲಾದ ವೀಣೆ ಶೇಷಣ್ಣ ರಸ್ತೆ ನಿವಾಸಿ
ಸ್ಪೂರ್ತಿ (31) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
13 ವರ್ಷದ ಹಿಂದೆ ಶ್ರೀಕಂಠ ಎಂಬುವರೊಂದಿಗೆ ಸ್ಪೂರ್ತಿ ವಿವಾಹವಾಗಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಆದರೆ ಸ್ಪೂರ್ತಿ ಪೋಷಕರು ಅಳಿಯ
ಶ್ರೀಕಂಠ ಹಾಗೂ ಆತನ ತಮ್ಮನ ಹೆಂಡತಿ ಕಿರುಕುಳ ನೀಡಿದ್ದಾರೆ,ಕಿರುಕುಳದಿಂದ ಬೇಸತ್ತು ಪುತ್ರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ ಎಂದು ದೂರು ನೀಡಿದ್ದಾರೆ.
ಕೆ ಆರ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.