ಸನಾತನ ಧರ್ಮವನ್ನು ಕಾಪಾಡಿಕೊಂಡು, ಇತರೆ ಧರ್ಮಗಳನ್ನು ಗೌರವಿಸಬೇಕು -ವಿಜಯಾನಂದ ತೀರ್ಥ ಸ್ವಾಮೀಜಿ

ಮೈಸೂರು: ನಮ್ಮ ಸನಾತನ ಧರ್ಮವನ್ನು ಕಾಪಾಡಿಕೊಂಡು ಪೂಜಿಸಬೇಕು ಇತರೆ ಧರ್ಮಗಳನ್ನು ಗೌರವಿಸಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ನುಡಿದರು.

ವಿಶ್ವ ಹಿಂದೂ ಪರಿಷತ್‌, ಬಜರಂಗ ದಳದಿಂದ ನಡೆಯುತ್ತಿರುವ ಶೌರ್ಯ ಜಾಗರಣ ರಥಯಾತ್ರೆ ಗುರುವಾರ ಗಣಪತಿ ಸಚ್ಚಿದಾನಂದ ಆಶ್ರಮ‌ ತಲುಪಿದ ವೇಳೆ‌ ಜಾನಪದ ಕಲಾತಂಡದೊಂದಿಗೆ ಭವ್ಯ ಸ್ವಾಗತ‌ ಕೋರಲಾಯಿತು.

ಈ‌ ವೇಳೆ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ರಥವನ್ನು ಸ್ವಾಗತಿಸಿ ಮಾತನಾಡಿ, ಹಿರಿಯ ಶ್ರೀಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತ್ರಿಪುರ ರಹಸ್ಯದ ರೆಕಾರ್ಡಿಂಗ್ನಲ್ಲಿ ಇದ್ದಾರೆ ಹಾಗಾಗಿ ರಥವನ್ನು ಸ್ವಾಗತಿಸಲು ನಮ್ಮನ್ನು ಕಳಿಸಿದ್ದಾರೆ ಎಂದು ತಿಳಿಸಿದರು.

ನಮ್ಮ ಧರ್ಮವನ್ನು ನಾವು ಎಂದಿಗೂ ಮರೆಯಬಾರದು, ನಮ್ಮ ಧರ್ಮದ ಬಗ್ಗೆ ಯುವ ಜನರಲಿ ಇನ್ನೂ ಹೆಚ್ಚು ತಿಳುವಳಿಕೆ ಮೂಡುವಂತಾಗಲಿ ಎಂದು ಆಶಿಸಿದರು.

ಧರ್ಮ ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ. ದೇಶ ಚೆನ್ನಾಗಿರಬೇಕೆಂದರೆ ಜನರು ಚೆನ್ನಾಗಿರಬೇಕು, ಜನರಲ್ಲಿ ಸಾಮರಸ್ಯತೆ ಇರಬೇಕು ಎಂದು ಹೇಳಿದರು.

ಎಲ್ಲರಲ್ಲೂ ನಮ್ಮ ಸನಾತನ ಧರ್ಮದ ಬಗ್ಗೆ ಅರಿವು ಉಂಟಾಗಬೇಕು ನಮ್ಮ ಧರ್ಮವನ್ನು ಕಾಪಾಡಿಕೊಳ್ಳಲು ನಾವು ಪ್ರಯತ್ನ ಮಾಡೋಣ, ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಹೊರಟಿರುವ ಈ ರಥ ದಿಗ್ವಿಜಯ ಸಾಧಿಸಲಿ, ನಿರ್ವಿಘ್ನವಾಗಿ ಸಾಗಲಿ ಎಂದು ಶ್ರೀಗಳು ಶುಭ ಹಾರೈಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಟಿ.ಪ್ರಕಾಶ್,  ಬಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಸೆ.25ರಂದು ಚಿತ್ರದುರ್ಗದಿಂದ ಪ್ರಾರಂಭವಾಗಿರುವ ಯಾತ್ರೆಯು ಸನಾತನ ಧರ್ಮ ರಕ್ಷಣೆ ಉದ್ದೇಶ ಹೊಂದಿದೆ. ಯುವ ಪೀಳಿಗೆಗೆ ಧರ್ಮ ರಕ್ಷಣೆಯಲ್ಲಿ ಬಲಿದಾನ ಹೊಂದಿದ ವೀರರ ಪರಿಚಯ ಮಾಡುವುದು ಯಾತ್ರೆಯ ಮೂಲ ಉದ್ದೇಶವಾಗಿದೆ.ಪರಿಷತ್‌ ಜಿಲ್ಲಾ ಕಾರ್ಯದರ್ಶಿ ಮಧುಶಂಕರ್‌, ಪರಿಷತ್‌ನ ಕಾನೂನು ವಿಭಾಗದ ಪ್ರಮುಖ್ ಅಂಬಿಕಾ, ಜಿಲ್ಲಾ ಮಹಿಳಾ ಘಟಕದ ಪ್ರಮುಖ್ ಸವಿತಾ ಘಾಟ್ಕೆ, ಜಿಲ್ಲಾ ಪ್ರಮುಖ್ ಲೋಕೇಶ್‌, ಮಠ ಮಂದಿರ ಪ್ರಮುಖ್‌ ಜನಾರ್ಧನ್‌ ಮತ್ತಿತರರು ‌ಪಾಲ್ಗೊಂಡಿದ್ದರು.