ಮೈಸೂರು: ವಿದ್ಯಾರ್ಥಿಗಳು ಊಟ ಮಾಡುವ ಆಹಾರದಲ್ಲಿ ಹುಳುಗಳಿದ್ದರೆ ಹೇಗಾಗಬೇಡ…
ಇಂತಹ ಕೆಟ್ಟ ಆಹಾರವನ್ನು ಮೈಸೂರಿನ ಹೆಸರಾಂತ ಜೆಸಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಬಡಿಸಲಾಗಿದೆ.
ಹುಳು ಮಿಶ್ರಿತ ಆಹಾರ ನೀಡಿದ ಕಾರಣ ಜೆ ಸಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳು ಊಟ ಅಲ್ಲೇ ಬಿಟ್ಟು ತಡರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿರುವ ಜೆ ಸಿ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ವಾರ್ಡನ್ ವಿರುದ್ದ ವಿದ್ಯಾರ್ಥಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಗುರುವಾರ ರಾತ್ರಿ ಊಟ ಬಿಟ್ಟು ಬೀದಿಗಿಳಿದ ವಿದ್ಯಾರ್ಥಿಗಳು ಘೋಷಣೆ ಕೂಗಿ ಪ್ರತಿಭಟಿಸಿದರು.
ಪ್ರತಿ ಬಾರಿ ಇದೇ ರೀತಿ ಆಹಾರ ನೀಡುತ್ತಾರೆ. ಇದರಿಂದ ನಮ್ಮ ಆರೋಗ್ಯ ಹಾಳಾಗುತ್ತಿದೆ,
ವಾರ್ಡನ್ ಹಾಸ್ಟೆಲ್‌ನಲ್ಲಿ ಇರುವುದೇ ಇಲ್ಲ ಹಾಸ್ಟೆಲ್ ವಾರ್ಡನ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.