ಮೈಸೂರು: ಭಾರಿ ವಿರೋಧದ ನಡುವೆಯೂ ಮಹಿಷ ದಸರಾಗೆ ಭರದ ಸಿದ್ದತೆ ನಡೆದಿದ್ದು,ಈಗಾಗಲೇ ಆಹ್ವಾನ ಪತ್ರಿಕೆ ಕೂಡಾ ಬಿಡುಗಡೆ ಮಾಡಲಾಗಿದೆ.
ಮಹಿಷಾಸುರನ ಭಾವಚಿತ್ರವಿರುವ ಆಹ್ವಾನ ಪತ್ರಿಕೆಯಲ್ಲಿ 50ನೇ ವರ್ಷದ ದಸರಾ ಎಂಬ ಹೆಡ್ ಲೈನ್ ಮುದ್ರಿತವಾಗಿದೆ ಜತೆಗೆ ಚಾಮುಂಡಿಬೆಟ್ಟಕ್ಕೆ ಮಹಿಷ ಬೆಟ್ಟ ಎಂದು ಮುದ್ರಿಸಲಾಗಿದೆ.
ಅ.13ರಂದು ಮಹಿಷ ದಸರಾ ಆಚರಣೆ ಮಾಡಲಾಗುತ್ತಿದ್ದು, ಕಾರ್ಯಕ್ರಮದ ವಿವರವನ್ನೂ ಪ್ರಕಟಿಸಲಾಗಿದೆ.
ಬೆಳಗ್ಗೆ 8ಕ್ಕೆ ತಾವರೆಕಟ್ಟೆ ಬಳಿ ಎಲ್ಲರೂ ಸೇರುವುದು.8.30ಕ್ಕೆ ಅತಿಥಿ ಗಣ್ಯರೊಡನೆ ಆದಿ ದ್ರಾವಿಡ ದೊರೆ ಮಹಿಷಾಸುರ ಮೂರ್ತಿಗೆ ಪುಷ್ಪನಮನ ಅರ್ಪಿಸುವುದು.
ಬೆ 9.30ಕ್ಕೆ ತಾವರೆಕಟ್ಟೆಯಿಂದ ಪುರಭವನಕ್ಕೆ ಬೈಕ್ ರ್‍ಯಾಲಿ,ಜಾನಪದ ಸಂಗೀತ ಮೇಳ, ಟ್ಯಾಬ್ಲೋಗಳ ಮೆರವಣಿಗೆ ಆಯೋಜಿಸಲಾಗಿದೆ.
11ಗಂಟೆಗೆ ಪುರಭವನದ ಮಹಿಷಾಸುರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು,
ಮಹಿಷ ದಸರ ಉದ್ಘಾಟನೆಯನ್ನು ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಮಾಡಲಿದ್ದಾರೆ.
ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ,ಬೌದ್ದ ಬಿಕ್ಕು ಬೋಧಿದತ್ತ ಭಂತೇಜಿ ಮತ್ತಿಒ ಭಾಗವಹಿಸಲಿದ್ದಾರೆ.