ಮೈಸೂರು: ಪ್ರತಾಪ್ ಸಿಂಹ ಡೋಂಗಿ ರಾಜಕಾರಣಿ, ಕಿಡಿ ಹತ್ತಿಸುವ ಕೆಲಸ ಮಾಡುವ ರಾಜಕಾರಣಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಮಹಿಷಾ ದಸರಾ ಆಚರಣೆ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ಹಮ್ಮಿ ಕೊಂಡಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು.
ಲೋಕಸಭಾ ಚುನಾವಣೆ ಬರುತ್ತಿದೆ. ಅವರು ಕ್ಷೇತ್ರಕ್ಕೆ ಮಾಡಿರುವ ಕೆಲಸ ಶೂನ್ಯ. ಈಗ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಮೈಸೂರಿಗೆ 400 ಆರ್.ಎಸ್ .ಎಸ್ ಕಾರ್ಯಕರ್ತರು ವಿವಿಧ ರಾಜ್ಯದಿಂದ ಬಂದಿದ್ದಾರೆ. ಬೇರೆ ಕಡೆಯಿಂದ ಮೈಸೂರಿಗೆ ಕರೆದುಕೊಂಡು ಬಂದಿದ್ದು ಯಾಕೆ.
ಮಹಿಷನ ಪೂಜೆ ಮಾಡಬೇಡ ಅಂತ ಹೇಳಲು ಆತ ಯಾರು ಹಿಂದುಳಿದ ದಲಿತ ಸಮುದಾಯದವರು ಮಹಿಷ ಪೂಜೆ ಮಾಡಿದರೆ ಅವರಿಗೆ ಸಮಸ್ಯೆ ಏನು ಎಂದು ಪ್ರಶ್ನಿಸಿದರು.
ಚಾಮುಂಡೇಶ್ವರಿ ವಿರುದ್ಧ ಏನಾದರೂ ಮಾಡಿದರೆ ಹೇಳಿ ಆಗ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಮ ಸರ್ಕಾರ ಇದ್ದಾಗ ಮಹಿಷಾ ಪ್ರತಿಮೆ ತೆಗೆಸಬೇಕಾಗಿತ್ತು. ಮಹಿಷ ಏನು ಟೆರರಿಸ್ಟಾ ಎಂದು ಕುಟುಕಿದರು.
ಪ್ರತಾಪ್ ಸಿಂಹ ದಲಿತ ವಿರೋಧಿ. 2015 ರಿಂದ ಮಹಿಷಾ ದಸರಾ ಶಾಂತಿಯುತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಹೇಳಿಕೆ ಕೊಟ್ಟರು ಪೊಲೀಸರು ಯಾಕೆ ಪ್ರತಾಪ್ ಸಿಂಹನ್ನ ಅರೆಸ್ಟ್ ಮಾಡ್ತಿಲ್ಲ ಎಂದು ಲಕ್ಷ್ಮಣ್ ಪ್ರಶ್ನಿಸಿದರು.
ಶಾಸಕ ಜಿ.ಟಿ ದೇವೇಗೌಡರ ಆತ್ಮಹತ್ಯೆ ಭಾಗ್ಯ ಹೇಳಿಕೆಗೆ ಟಾಂಗ್ ಕೊಟ್ಟ ಎಂ ಲಕ್ಷ್ಮಣ್, ಅಂಕಿ ಅಂಶಗಳ ಕೊರತೆ ಇದ್ದರೆ ನಾನೆ ಸಹಾಯ ಮಾಡುವೆ. ಯಾವ ಆಧಾರದಲ್ಲಿ ಈ ರೀತಿ ಆರೋಪ ಮಾಡ್ತೀರಿ ಎಂದು ಇದೇ ವೇಳೆ ಲಕ್ಷ್ಮಣ್ ಖಾರವಾಗಿ ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ನೇತೃತ್ವದ ಆಡಳಿತದಲ್ಲಿ 4457 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2013-2018ರ ಸಿದ್ದರಾಮಯ್ಯ ಅವಧಿಯಲ್ಲಿ 3500 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2023ರ ನಂತರ ಸಿದ್ದರಾಮಯ್ಯನವರ ಅವಧಿಯ ನಾಲ್ಕು ತಿಂಗಳಲ್ಲಿ 96ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂಕಿ ಅಂಶ ನೋಡಿದರೆ ಗೊತ್ತಾಗುವುದಿಲ್ಲವೆ ಯಾರ ಅವಧಿಯಲ್ಲಿಎಷ್ಟು ಆತ್ಮಹತ್ಯೆ ಆಗಿದೆ ಅಂತಾ.
ಸುಮ್ಮನೆ ದಾಖಲೆ ರಹಿತ ಆರೋಪ ಮಾಡಬೇಡಿ ಎಂದು ಜಿ.ಟಿ ದೇವೇಗೌಡರಿಗೆ ಎಂ. ಲಕ್ಷ್ಮಣ್ ಎಚ್ಚರಿಸಿದರು.