ಎಚ್.ಡಿ.ಕೆ ಗೆ ಕಾಮನ್ ಸೆನ್ಸ್ ಇಲ್ಲ:ಡಿ. ಕೆ. ಶಿವಕುಮಾರ್ ವಾಗ್ದಾಳಿ

ಮೈಸೂರು: ಎಚ್.ಡಿ. ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಮೈಸೂರಿನಲ್ಲಿ ಬುಧವಾರ ಮಾಧ್ಯಮ ದವರರೊಂದಿಗೆ ಡಿಕೆಶಿ ಮಾತನಾಡಿದರು.

ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ, ಸಿಎಂ ಆಗಿದ್ದವರಿಗೆ ಕಾಮನ್ ಸೆನ್ಸ್ ಇರಬೇಕು ಎಂದು ಹೇಳಿದರು.

ಕನಕಪುರವನ್ನ ಬೆಂಗಳೂರಿಗೆ ಸೇರಿಸುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಇದು ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶ ಎಂದು ಟೀಕಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಈ ರೀತಿ ಡಿಕೆ ಶಿ ತಿರುಗೇಟು ನೀಡಿದರು.

ಹೆಚ್.ಡಿ ಕುಮಾರಸ್ವಾಮಿ ಅವರ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಹೆಚ್.ಡಿ ಕುಮಾರಸ್ವಾಮಿ ಅವರ ತಂದೆಯನ್ನ ಕೇಳಿ ತಿಳಿದುಕೊಳ್ಳಲಿ ಎಂದು ಹೇಳಿದರು.

ನಾವು ಬೆಂಗಳೂರಿನವರು ರಾಮನಗರದವರಲ್ಲ ಎಂದು ಡಿಕೆಶಿ ಟಾಂಗ್ ನೀಡಿದರು.

ಆಡಳಿತಕ್ಕಾಗಿ ಕೆಲವು ಭಾಗ ಮಾಡಿದ್ದಾರೆ. ರಾಮನಗರಾನೂ ನಮ್ಮದೇ, ಬಿಡದಿ, ಚನ್ನಪಟ್ಟಣವೂ ನಮ್ಮದೇ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಮುಂದಿನ ದಿನಗಳಲ್ಲಿ ಮೈಸೂರು ದಸರಾ ಥೀಮ್ ಚೇಂಚ್ ಆಗಬೇಕಿದೆ ಎಂದು ಇದೇ ವೇಳೆ ಡಿ.ಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ

ಮೈಸೂರು ದಸರಾ ಗೆ ರೀ ಲುಕ್ ಕೊಡಬೇಕು,
ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ದಸರಾಗೆ 400 ವರ್ಷಗಳ ಇತಿಹಾಸ ಇದೆ. ಇತಿಹಾಸ ಉಳಿಸಿಕೊಂಡು ನ್ಯೂ ಲೂಕ್ ಕೊಡಬೇಕಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಈ ಮೂಲಕ ಹೊಸ ರೀತಿ ಹಾಗೂ ಟೂರಿಸಂಗೆ ಹೆಚ್ಚು ಒತ್ತು ಕೊಬೇಕು ಎಂದರು.

ಮೈಸೂರಿಗೆ ಬರುವ ಗೆಸ್ಟ್ ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಏಕೆಂದರೆ ದುಡ್ಡು ಕೊಟ್ಟು ಬಂದಿರುತ್ತಾರೆ. ಅವರಿಗೆಲ್ಲಾ ಪ್ರತ್ಯೇಕವಾದ ವ್ಯವಸ್ಥೆ ಮಾಡಬೇಕು ಡಿಕೆಶಿ ತಿಳಿಸಿದರು.

ಬಂಗಾರಪ್ಪ, ಕೃಷ್ಣ ಅವರ ಮಂತ್ರಿ ಮಂಡಲದಲ್ಲಿ ದಸರಾ ನೋಡಿದ್ದೆ, ಟಾರ್ಚ್ ಲೈಟ್ ಪೆರೆಡ್ ತುಂಬಾ ಚೆನ್ನಾಗಿತ್ತು ಎಂದು ಅವರು ಖುಷಿ ಪಟ್ಟರು.

ದಸರಾದಲ್ಲಿ ಓವರ್ ಕ್ರೌಡ್ ಇತ್ತು.
ಪರಂಪರೆ ಉಳಿಸಿಕೊಂಡು ಬಂದಿದ್ದೇವೆ‌, ಸ್ಥಬ್ಧ ಚಿತ್ರ ಕಾಂಪಿಟೇಷನ್ ಗೆ ಪ್ರತಿ ಜಿಲ್ಲೆಯಲ್ಲೂ ಸ್ಪರ್ಧೆ ನಡೆಯಬೇಕು ಎಂದು ಹೇಳಿದರು.

ದಸರಾವನ್ನ ಮೈಸೂರಿಗೆ ಮಾತ್ರ ಸೀಮಿತವಾಗಲು ಬಿಡಲು ಸಾಧ್ಯವಿಲ್ಲ. ದಸರಾ ಮಹೋತ್ಸವ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚು ಪ್ರಖ್ಯಾತವಾಗಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜ್ಯಮಟ್ಟದ ಅಧಿಕಾರಿಗಳನ್ನ ದಸರಾಗೆ ಬಳಸಿಕೊಳ್ಳಬೇಕು, ಮೈಸೂರು ಅಧಿಕಾರಿಗಳು ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.