ಸ್ನೇಹಿತರ ನಡುವೆ ಜಗಳ:ಒಬ್ಬನ ಕೊಲೆ; ಹಣಕಾಸಿನ ವಿಚಾರಕ್ಕೆ ಹೊಡೆದಾಟ

ಮೈಸೂರು: ಇತ್ತೀಚೆಗೆ ಸ್ನೇಹ ಎಂಬ ಪದ ಬೆಲೆ ಕಳೆದು ಕೊಳ್ಳುತ್ತಿದೆಯೇನೊ ಎಂಬ ಅನಿಸಿಕೆ ಕಾಡಲಾರಂಭಿಸಿದೆ.

ಏಕೆಂದರೆ ಸ್ನೇಹಿತರು ಒಬ್ಬರಿಗೊಬ್ಬರು ನೆರವಾಗಬೇಕು ಆದರೆ ಅವರವರಲ್ಲೇ ಜಗಳವಾಡಿ ಕೊಲೆಗಳೆ ನಡೆದುಹೋಗುತ್ತಿವೆ.

ಇದೇ ರೀತಿ ಮೈಸೂರಿನಲ್ಲಿ
ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ನಡುವೆ ಜಗಳವಾಗಿ ಹೊಡೆದಾಡಿಕೊಂಡು ಕಡೆಗೆ ಅದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಹೇಯ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿಕಾಲೋನಿಯಲ್ಲಿ ನಡೆದಿದೆ.

ಆಸಿಫ್ .ಆ.ಬಿಲ್ಲಾ ಆಸಿಫ್(36)ಕೊಲೆಯಾದ ದುರ್ದೈವಿ.

ಗಲಾಟೆಯಲ್ಲಿ ಗಾಯಗೊಂಡ ಆರೋಪಿ ಸಲೀಂಪಾಷಾ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಬೀಡಿ ಕಾಲೋನಿಯ ಬಳಿ ಟೀ ಅಂಗಡಿಯಲ್ಲಿ ಕುಳಿತಿದ್ದ ಆಸಿಫ್ ಜೊತೆ ಹಣಕಾಸಿನ ವಿಚಾರದಲ್ಲಿ ಸಲೀಂ ಪಾಷ ಕ್ಯಾತೆ ತೆಗೆದಿದ್ದಾನೆ.

ಆಗ ಇಬ್ಬರ ನಡುವೆ ಹೊಡೆದಾಟ ಶುರುವಾಗಿದೆ.ಗಲಾಟೆ ಗಂಭೀರ ಸ್ವರೂಪಕ್ಕೆ ತಿರುಗಿದಾಗ ಆಸಿಫ್ ತಲೆಗೆ ಸಲೀಂ ನೀಲಗಿರಿಮರದ ಪಟ್ಟಿಯಿಂದ ತಲೆಗೆ ಹೊಡೆದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದ ಆಸಿಫ್ ನನ್ನು ಕೆ.ಆರ್.ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಡೆದಾಟದಲ್ಲಿ ಗಾಯಗೊಂಡ ಆರೋಪಿ ಸಲೀಂಪಾಷಾನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾಹ್ನವಿ,ಎಸಿಪಿ ಶಾಂತಮಲ್ಲಪ್ಪ,ಉದಯಗಿರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜು ಭೇಟಿ ನೀಡಿ ನೀಡಿ ಮಾಹಿತಿ ಪಡೆದಿದ್ದಾರೆ.

ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.