ಚಾಮರಾಜನಗರ: ಚಾಮರಾಜನಗರ ವಲಯ ವ್ಯಾಪ್ತಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ದಾಖಲಿಸಿ ವಿವಿಧ ಪ್ರಕರಣಗಳಲ್ಲಿ ಜಫ್ತಿಪಡಿಸಿದ ಸುಮಾರು2,30,000 ಮೌಲ್ಯದ 487.560 ಲೀ ಮದ್ಯ ಹಾಗೂ 76.900 ಲೀ ಬಿಯರ್ ಅನ್ನು ನಾಶಪಡಿಸಲಾಯಿತು.
ಚಾಮರಾಜನಗರ ವಲಯ ಕಚೇರಿ ಆವರಣದಲ್ಲಿ ಚಾಮರಾಜನಗರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಡಿ. ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ನಾಶಪಡಿಸಲಾಯಿತು.
ಈ ವೇಳೆ ವಲಯ ಅಬಕಾರಿ ನಿರೀಕ್ಷಕ ಸಿ.ಎಂ. ಮಹದೇವ, ಚಾಮರಾಜನಗರ ಉಪವಿಭಾಗ ಅಬಕಾರಿ ನಿರೀಕ್ಷಕ ಎಂ.ಬಿ. ಉಮಾಶಂಕರ್, ಚಾಮರಾಜನಗರ ತಾಲೂಕು ಕಚೇರಿಯ ಗ್ರಾಮ ಆಡಳಿತಾಧಿಕಾರಿ ಎಸ್. ಉಜ್ವಲ್, ಕೆ.ಎಸ್.ಬಿ.ಸಿ.ಎಲ್. ಡಿಪೋ ಸಹಾಯಕ ವ್ಯವಸ್ಥಾಪಕ ಕೆ.ಎಂ. ಸಿದ್ದರಾಜು ಹಾಗೂ ಚಾಮರಾಜನಗರ ವಲಯದ ಸಿಬ್ಬಂದಿ ಆರ್. ರಾಜೇಶ್, ಸಿ. ಮಣಿಕಂಠ, ಆರ್. ರಾಜು ಹಾಜರಿದ್ದರು.