ಚಾಮರಾಜನಗರ: ಚಾಮರಾಜನಗರ ತಾಲೂಕಿನ ಬೂದಿತಿಟ್ಟು ಗ್ರಾಮದ ಅಡಿಕೆ ಹಾಗೂ ತೆಂಗು ತೋಟದ ಮಧ್ಯೆ ಅಕ್ರಮವಾಗಿ ಬೆಳದಿದ್ದ ಸುಮಾರು 19 ಕೆಜಿ ಗಾಂಜಾ ಗಿಡಗಳನ್ನು ಸೆನ್ ಪೊಲೀಸರು ಶುಕ್ರವಾರ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕೋಡಿಮೋಳೆ ಗ್ರಾಮದ ಶಿವಕುಮಾರ್ ಅಲಿಯಾಸ್ ಪುಲ್ಲಿ ಎಂಬುವನು ಗಾಂಜಾ ಗಿಡ ಬೆಳೆದಿದ್ದು ಇಂದು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿಲಾಗಿದೆ.
ದಾಳಿ ವೇಳೆ ಇನ್ಸ್ ಪೆಕ್ಟರ್ ಸಾಗರ್, ಸಬ್ ಇನ್ಸ್ ಪೆಕ್ಟರ್ ಗಳಾದ ಪ್ರಕಾಶ್, ಧನಂಜಯ, ಮುಖ್ಯ ಪೇದೆಗಳಾದ ಮಹದೇವಸ್ವಾಮಿ, ರಮೇಶ್, ಚಿಕ್ಕಣ್ಣ, ಮಹೇಶ್, ನವೀನ್, ಭೀಮಪ್ಪ ಹಿಂಡಿ, ಖಾದರ್ ಭಾಗವಹಿಸಿದ್ದರು.