ಜಮೀನಿನಲ್ಲಿ ಗಾಂಜಾ ಬೆಳೆದಿದ್ದವ ಅರೆಸ್ಟ್

ಚಾಮರಾಜನಗರ: ಜಮೀನು ನೋಡಿಕೊಳ್ಳುವ ನೆಪದಲ್ಲಿ ಗಾಂಜಾ ಬೆಳೆ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಲೋಕೇಶ್ ಬಂಧಿತ ಆರೋಪಿ.

ಆರೋಪಿಯಿಂದ 545 ಗ್ರಾಂ ತೂಕದ ಹಸಿಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಮೌಲ್ಯ ಅಂದಾಜು 15,000 ರೂ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಹೋಬಳಿಯ ಮಲ್ಲದೇವನಹಳ್ಳಿ ಗ್ರಾಮದ ಸರ್ದಾರ್ ಷರೀಷ್ ವರಿಗೆ ಸೇರಿದ ಜಮೀನನ್ನು ನೋಡಿಕೊಳ್ಳುವ ನೆಪದಲ್ಲಿ ಲೋಕೇಶ್ ಗಾಂಜಾ ಗಿಡ ಬೆಳೆದಿದ್ದ.

ಖಚಿತ ಮಾಹಿತಿ ಆಧರಿಸಿ ಅಬಕಾರಿ ಜಂಟಿ ಆಯುಕ್ತರು ಮೈಸೂರು ವಿಭಾಗದ
ಡಾ. ವಿಜಯಕುಮಾರ್ ಅವರ ಆದೇಶದ ಮೇರೆಗೆ ಅಬಕಾರಿ ಉಪ ಆಯುಕ್ತರು ಚಾಮರಾಜ ನಗರ ಜಿಲ್ಲೆಯ ಆರ್ ನಾಗಶಯನ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕರು, ಚಾಮರಾಜನಗರ ಉಪ ವಿಭಾಗ ಎಂ.ಡಿ. ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ದಾಳಿಯಲ್ಲಿ ಉಮಾಶಂಕರ್ ಅಬಕಾರಿ ನಿರೀಕ್ಷಕರು,ಚಾಮರಾಜನಗರ ಉಪವಿಭಾಗ ನಂದಿನಿ ಬಿ.ಪಿ ಅಬಕಾರಿ ಉಪನಿರೀಕ್ಷಕರು, ಚಾಮರಾಜನಗರ ಉಪವಿಭಾಗ ಕಾನ್ಸ್ಟೇಬಲ್ ಗಳಾದ ರವಿ,ನಾಗೇಶ್ ಹಾಗೂ ವಾಹನ ಚಾಲಕರಾದ ವೀರತಪ್ಪ ಭಾಗವಹಿಸಿದ್ದರು.