ಮೈಸೂರು: ಇತ್ತೀಚೆಗೆ ಮೈಸೂರಿನಲ್ಲಿ ಸರ್ಕಾರಿ ಜಾಗದಲ್ಲಾಗಲೀ ಖಾಸಗಿ ಕಟ್ಟಡಗಳ ಬಳಿಯಾಗಲಿ ಗಂಧದ ಮರಗಳು ಇದ್ದರೆ ಅವುಗಳನ್ನು ಕಡಿದು ಹೊತ್ತೊಯ್ಯುವ ಘಟನೆಗಳು ನಡೆಯುತ್ತಲೇ ಇದೆ.
ಅದೇ ರೀತಿ ನಗರದ ಜೆ.ಎಲ್.ಬಿ.ರಸ್ತೆಯಲ್ಲಿರುವ ಇನ್ಸ್ ಟ್ಯೂಟ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ ಬೆಳೆದಿದ್ದ ಗಂಧದ ಮರ ಕಳುವಾಗಿದೆ.
ದುಷ್ಕರ್ಮಿಗಳು ರಾತ್ರೋ ರಾತ್ರಿ ಮರವನ್ನ ಕಡಿದು ಹೊತ್ತೊಯ್ದಿದ್ದಾರೆ.
ಬುಡ ಹಾಗೂ ಕೊಂಬೆಗಳನ್ನ ಬಿಟ್ಟು ಕಾಂಡದ ಭಾಗವನ್ನ ಕಡಿದು ಕದ್ದೊಯ್ದಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.