ಬ್ಯಾರೆನ್ ಲೈಸೆನ್ಸ್ ನವೀಕರಣ ಉಲ್ಲಂಘನೆ:ಪ್ರಶ್ನಿಸಿದ‌ ರೈತನಿಗೆ‌ ಚಪ್ಪಲಿ ತೋರಿಸಿದ ಮಾಹಾನುಭಾವ

ಮೈಸೂರು: ತಂಬಾಕು ಬೇಯಿಸುವ ಬ್ಯಾರೆನ್ ಲೈಸೆನ್ಸ್ ನವೀಕರಣ ವಿಚಾರದಲ್ಲಿ ನಿಯಮ ಉಲ್ಲಂಘಿಸಿದ‌ ಬಗ್ಗೆ ಪ್ರಶ್ನೆ ಮಾಡಿದ ರೈತನಿಗೆ ಮಂಡಳಿ ಅಧಿಕಾರಿಯೊಬ್ಬರು ಚಪ್ಪಲಿ ತೋರಿಸಿ ಆವಾಜ್ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡಿದಿದೆ.

ತಾಲೂಕಿನ ಚಿಲ್ಕುಂದಾ ಗ್ರಾಮದಲ್ಲಿ ಈ ಹೇಯ ಘಟನೆ ನಡೆದಿದ್ದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೊಂದ ರೈತ ತಂಬಾಕು ಮಂಡಳಿ ಅಧಿಕಾರಿ ಭೂಷಣ್ ನಡೆಸಿದ ದರ್ಪದ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಚಿಲ್ಕುಂದಾ ಗ್ರಾಮದ ರೈತ ಕೃಷ್ಣಕುಮಾರ್ ಎಂಬುವರು ತಂಬಾಕು ಬೇಯಿಸುವ ಬ್ಯಾರೆನ್ ಲೈಸೆನ್ಸ್ ನವೀಕರಣದಲ್ಲಿ ನಿಯಮಗಳನ್ನ ಗಾಳಿಗೆ ತೂರಲಾಗಿದೆ ಎಂದು ಕೇಳಿದ್ದಾರೆ.

ಬ್ಯಾರೆನ ಅನ್ ಫಿಟ್ ಆಗಿದ್ದರೂ 3 ವರ್ಷಗಳಿಂದ ನವೀಕರಣವಾಗುತ್ತಿದೆ. ಈ ಬಗ್ಗೆ ಕೃಷ್ಣಕುಮಾರ್ ಬಹಿರಂಗವಾಗಿ ಪ್ರಶ್ನಿಸಿದ್ದಾರೆ.ಸಿಟ್ಟಿಗೆದ್ದ ಅಧಿಕಾರಿ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಹೊಡೆಯುವ ಯತ್ನ ಮಾಡಿ ಆವಾಜ್ ಹಾಕಿದ್ದಾರೆ.
ನಂತರ ಆವಾಜ್ ಹಾಕುತ್ತಾ ಹಲ್ಲೆಗೂ ಯತ್ನಿಸಿದ್ದಾರೆ.