ಚಾಮರಾಜನಗರ: ಜಿಂಕೆ ಮಾಂಸ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಅರಣ್ಯ ಸಂರಕ್ಷಣಾಧಿಕಾರಿಗಳು
ಬಂಧಿಸಿದ್ದಾರೆ.
ದಾಳಿ ವೇಳೆ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಬಲೆ ಬೀಸಲಾಗಿದೆ.
ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರದ ವನ್ಯಜೀವಿ ಉಪ ವಿಭಾಗದ, ಮಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಬೂದಿಪಡಗ ಗ್ರಾಮದಲ್ಲಿ ಜಿಂಕೆ ಮಾಂಸ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಚಾಮರಾಜನಗರದ
ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ದೀಪ್, ಜೆ ಕಂಟ್ರಾಕ್ಟರ್ ರವರ ಮಾರ್ಗದರ್ಶನ ದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಅವರ ಸೂಚನೆ ಮೇರೆಗೆ ದಾಳಿ ಮಾಡಲಾಯಿತು.
ನಿಸಾರ್ ಅಹಮದ್, ಪಿ.ಕೆ ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ ಮಣಜನೂರು ಅವರ ನೇತೃತ್ವದಲ್ಲಿ ಬೂದಿಪಡಗ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ನಿಂಗರಾಜು, ಎಸ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬಂಧಿತರಿಂದ ಜಿಂಕೆಯ ಹಸಿ ಮಾಂಸ ವಶಪಡಿಸಿಕೊಂಡಿದ್ದು, ಈ ಸಂಬಂಧ ವನ್ಯಜೀವಿ ಪ್ರಕರಣ ದಾಖಲಿಸಿ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.