ಮೈಸೂರು: ಸಾಮಾನ್ಯವಾಗಿ ನಾಗರಹೊಳೆ ಸಫಾರಿಗೆ ಹೋದವರಿಗೆಲ್ಲ ಕಾಡೆಮ್ಮೆ ಆನೆಗಳೇ ಹೆಚ್ಚು ದರ್ಶನವಾಗುತ್ತದೆ.
ಅದೇನು ಅದೃಷ್ಟವೋ ಈ ಬಾರಿ ಸಫಾರಿಗೆ ತೆರಳಿದ್ದ ಹಲವು ಮಂದಿಗೆ ವ್ಯಾಘ್ರನ ದರ್ಶನ ಕೂಡ ಆಗಿಬಿಟ್ಟಿದೆ.
ಪ್ರವಾಸಿಗರಿಗೆ ಹುಲಿ ದರುಶನವಾಗಿದೆ,ಅದೂ ಮರದ ಮೇಲೆ ನಿಂತು ಪೋಟೋಗೆ ಪೋಸ್ ನೀಡಿದ್ದು ಇದನ್ನು ವಿಡಿಯೋ ಮಾಡಿ ಪ್ರವಾಸಿಗರು ವೈರಲ್ ಮಾಡಿದ್ದಾರೆ.
ಸಫಾರಿಗೆ ಸಾಗುವ ರಸ್ತೆಯ ಪಕ್ಕದ ಮರದ ಮೇಲೆ ಹುಲಿ ಠೀವಿಯಿಂದ ನಿಂತಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.