ಶ್ರೀವತ್ಸ ಹುಟ್ಟುಹಬ್ಬ: ಪಾರಿವಾಳಗಳ ಆಹಾರದಲ್ಲಿ ಮೂಡಿಬಂದ ಶಾಸಕನ ಹೆಸರು

ಮೈಸೂರು: ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ರವರ ಹುಟ್ಟುಹಬ್ಬ ನವೆಂಬರ್ ‌೩ ರಂದು‌ ವಿಶೇಷವಾಗಿ ಆಚರಿಸಲಾಯಿತು.

ಶಾಸಕರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿ ಶುಭ ಕೋರಿದರು.

ಶ್ರೀ ವತ್ಸ ಅವರ ಅಭಿಮಾನಿಗಳು ಪಾರಿವಾಳಗಳಿಗೆ ಆಹಾರ ನೀಡುವ ಮೂಲಕ ಜನುಮ‌ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಮೈಸೂರು ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಪಾರಿವಾಳಗಳಿಗೆ ನೀಡುವ ಧಾನ್ಯದಲ್ಲಿ ಶಾಸಕ ಶ್ರೀವತ್ಸ ರವರ ಹೆಸರು ಮೂಡಿತು.

ಅಭಿಮಾನಿಗಳು ಹಮ್ಮಿಕೊಂಡಿದ್ದ ಈ ವಿಶಿಷ್ಟ ಜನ್ಮ ದಿನಾಚರಣೆ ಸಾರ್ವಜನಿಕರ ಗಮನ ಸೆಳೆಯಿತು.