ಕನ್ನಡ ಸಾಮಾಜಿಕ ಬಂಧನ ಬೆಸೆಯುವ ಅರ್ಥಪೂರ್ಣ ಭಾಷೆ: ಮಡ್ಡಿಕೆರೆ ಗೋಪಾಲ್

ಮೈಸೂರು: ಕನ್ನಡ ಭಾಷೆ ವೈಜ್ಞಾನಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಬಂಧನವನ್ನು ಬೆಸೆಯುವ ಅರ್ಥಪೂರ್ಣ ಭಾಷೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್  ಹೇಳಿದರು.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಯೋಗ ಭವನದಲ್ಲಿ ಭುವನೇಶ್ವರಿ ಸೇವಾ ಟ್ರಸ್ಟ್  ಏರ್ಪಡಿಸಿದ್ದ ೬೮ ನೇ ಕನ್ನಡ ರಾಜ್ಯೋತ್ಸವದಲ್ಲಿ

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಅವರು ಮಾತನಾಡಿದರು.

ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.

ಕೇವಲ ನವೆಂಬರ್ ಕನ್ನಡಿಗರಾಗದೇ,ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ,ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ ಎಂದು ದೃಢ ನಿರ್ಧಾರ ಮಾಡಿ ನಡೆದುಕೊಳ್ಳುವ ಕನ್ನಡಿಗರಾಗಬೇಕು ಎಂದು ಮಡ್ಡಿಕೆರೆ ಗೋಪಾಲ್ ತಿಳಿಸಿದರು.

ನಗರಪಾಲಿಕ ಸದಸ್ಯ ಬಿ. ಬಿ ಮಂಜುನಾಥ್ ಮಾತನಾಡಿ ಕನ್ನಡವೆಂದರೆ ಬದುಕಿನ‌‌ ಕ್ರಮ. ಕನ್ನಡ ಭಾಷೆ ಕರುಣೆಯಷ್ಟು ಸಹಜವಾದುದು. ಹಾಗಾಗಿ ಕನ್ನಡವನ್ನು ಬರಿಯ ನುಡಿಯೆಂದು ಭಾವಿಸದೆ ಅದನ್ನೊಂದು ಜೀವನಶೈಲಿ ಎಂದು ಭಾವಿಸಬೇಕು ಎಂದು ಹೇಳಿದರು.

ಮತ್ತೊಬ್ಬ ಸದಸ್ಯ ಮಾವಿ ರಾಮ್ ಪ್ರಸಾದ್ ಮಾತನಾಡಿ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡ ಉಳಿಸಿ ಬೆಳೆಸಲು ಕನ್ನಡ ಮನಸ್ಸುಗಳ ಅವಶ್ಯಕತೆ ಇದೆ ಎಂದು ಹೇಳಿದರು.

ಜಿಲ್ಲಾಡಳಿತ ೨೦೨೩ ರ ವಿವಿಧ ಕ್ಷೇತ್ರದ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ

ಡಾ. ಆರ್ ಎಚ್ ಪವಿತ್ರ,  ಡಾ. ಎಂ ಕೆ ಅಶೋಕ್, ಸುತ್ತೂರು ನಂಜುಂಡ ನಾಯಕ, ಜೀವದಾರ ಗಿರೀಶ್, ಸಿ. ಆರ್ ರಾಘವೇಂದ್ರ ಪ್ರಸಾದ್, ಅಂಬಾಳೆ ಶಿವಣ್ಣ ಅವರುಗಳನ್ನು ಈ ವೇಳೆ ಅಭಿನಂದಿಸಲಾಯಿತು.

ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಾಗಶ್ರೀ ಸುಚಿಂದ್ರ, ಸುಚೇಂದ್ರ, ಮುಳ್ಳೂರು ಸುರೇಶ್, ಕಾವೇರಮ್ಮ,ವರುಣ ಮಹದೇವ್, ಲೋಕೇಶ್, ಗೋಪಾಲ್, ರಾಜಕುಮಾರ್, ಸಂದೀಪ್, ಬಸವರಾಜು, ಚಕ್ರಪಾಣಿ, ಮಹೇಶ್, ರೇಖಾ, ರಾಜು, ಚಕ್ಕರೆ, ಜಗದೀಶ್, ರೂಪ, ರಮೇಶ್  ಮತ್ತಿತರರು ಹಾಜರಿದ್ದರು.