ಬೆಂಗಳೂರು: ಮನೆಗೆ ನುಗ್ಗಿ ಸರ್ಕಾರಿ ಅಧಿಕಾರಿಯನ್ನು ಭೀಕರಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದು ಜನತೆ ಬೆಚ್ಚಿಬಿದ್ದಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಗಿದ್ದ ಪ್ರತಿಮಾ ಅವರ ಕೊಲೆಯಾಗಿದೆ.
ಬೆಂಗಳೂರು ಸಮೀಪದ ದೊಡ್ಡ ಕಲ್ಲ ಸಂದ್ರದ ಗೋಕುಲ್ ಅಪಾರ್ಟ್ಮೆಂಟ್ ನಲ್ಲಿ ಪ್ರತಿಮಾ ವಾಸವಾಗಿದ್ದರು.
ರಾತ್ರಿ ಆಕೆ ಕೆಲಸ ಮುಗಿಸಿ ಬಂದಿದ್ದರು ಚಾಲಕ ಅವರನ್ನು ಬಿಟ್ಟು ವಾಹನ ತೆಗೆದುಕೊಂಡು ಹೋಗಿದ್ದರು.
ಆಕೆ ಮನೆಯಲ್ಲಿ ಒಬ್ಬರೇ ವಾಸವಿದ್ದರು.ಅವರ ಪತಿ ಬೇರೆ ಊರಿನಲಿ ಇದ್ದಾರೆ, ಪ್ರತಿಮಾ ಸಹೋದರ ಪ್ರತೀಶ್ ಬೆಂಗಳೂರಿನಲ್ಲೇ ವಾಸವಿದ್ದಾರೆ ಎಂದು
ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.
ದುಷ್ಕರ್ಮಿಗಳು ಉಸಿರುಗಟ್ಟಿಸಿ ಸಾಯಿಸಿ ನಂತರ ಚಾಕುವಿನಿಂದ ಕುತ್ತಿಗೆಯನ್ನು ಇರಿದು ಕೊಲೆ ಮಾಡಿದ್ದಾರೆ.
ಪ್ರತಿಭಾ ತುಂಬಾ ಧೈರ್ಯವಂತೆ ಕೆಲಸದ ವಿಷಯವಾಗಿ ಕೊಲೆಯಾಗಿದೆಯೊ ಏನೋ ಒಂದೂ ಗೊತ್ತಿಲ್ಲ.ಸರಿಯಾದ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಸಹೋದರ ಪ್ರತೀಶ್ ಒತ್ತಾಸಿದ್ದಾರೆ.
ಇವತ್ತು ನಾವಿಬ್ಬರು ಮದುವೆಗೆ ಹೋಗಬೇಕಿತ್ತು,ನಿನ್ನೆ ರಾತ್ರಿ ಕಾಲ್ ಮಾಡಿದ್ದೆ,ರಿಸೀವ್ ಮಾಡಿರಲಿಲ್ಲ,ಹಾಗಾಗಿ ಬೆಳಿಗ್ಗೆ ಕಾಲ್ ಮಾಡಿದೆ ರಿಸೀವ್ ಮಾಡಲಿಲ್ಲ, ಆಗ ಅನುಮಾನ ಉಂಟಾಗಿ ಪಕ್ಕದ ಮನೆಯವರಿಗೆ ನೋಡಲು ಹೇಳಿದೆ.
ಅವರು ಹೋದಾಗ ಬಾಗಿಲು ತೆಗೆದೇ ಇತ್ತು ರಕ್ತದ ಮಡುವಲ್ಲಿ ಬಿದ್ದಿದ್ದಳು ಎಂದು ಗೊತ್ತಾಗಿ ಶಾಕ್ ಆದೆ ಎಂದು ಸಹೋದರ ಪ್ರತೀಶ್ ತಿಳಿಸಿದ್ದಾರೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಸ್ಥಳಕ್ಕೆ
ಡಿಸಿಪಿ ರಾಹುಲ್ ಕುಮಾರ್,ಜಿಲ್ಲಾಧಿಕಾರಿ ದಯಾನಂದ್ ಹಾಗೂ ಸುಬ್ರಹ್ಮಣ್ಯಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.