-ಜಿ.ಆರ್. ಸತ್ಯಲಿಂಗರಾಜು
ಸಿನಿಮಾದಲ್ಲಿ ನಿಪುಣ ಕಲಾವಿದರು ಮಾತ್ರ ಇರಲ್ಲ, ನೈಜತೆ ಕಾರಣದಿಂದ ಬೇರೆಬೇರೆಯವರನ್ನೂ ಬಳಸಲಾಗುತ್ತೆ.
ಇಂಥವರಿಗೆ ನಿಪುಣರಲ್ಲದ ಕಲಾವಿದ’ ಎನ್ನಲಾಗುತ್ತೆ.
ಸಿನಿಮಾದ ನಿರ್ದಿಷ್ಟ ಪಾತ್ರಕ್ಕೆ, ನಿಜ ಜೀವನದಲ್ಲೂ ನಿರ್ದಿಷ್ಟ ಕೆಲಸ ಮಾಡುತ್ತಿದ್ದವರನ್ನೇ ಬಳಸುವುದು ಹೊಸತಲ್ಲ. ಅತೀ ಹಿಂದಿನದು.
ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವವನು, ರೌಡಿ ಎನಿಸಿಕೊಂಡವನು…ಹೀಗೇ ನಿಜ ಜೀವನದಲ್ಲಿ ಏನಾಗಿದ್ದಾರೋ, ಸಿನಿಮಾ ಪಾತ್ರವನ್ನ ಅವರಿಂದಲೇ ಮಾಡಿಸುವುದು ಇದೆ.
ಇದರಿಂದ ಪ್ರಚಾರ, ಹಣ, ಸಮಯ, ಸಂಚಾರ ಇತ್ಯಾದಿ ಉಳಿಯುತ್ತೆಂಬ ಲೆಕ್ಕಾಚಾರ ಇರುತ್ತೆ.
ಆದರೆ ನಿಪುಣರಲ್ಲದ ಇಂಥವರಿಗೆ, ಅಭಿನಯವೇ ವೃತ್ತಿ ಮಾಡಿಕೊಂಡಿರುವ ಕಲಾವಿದರಂತೆ ತಾಂತ್ರಿಕ ಅಡಚಣೆ, ಸೀಮಿತತೆ, ಭಾವಾಭಿನಯ ಗೊತ್ತಿರಲ್ಲ. ಹಂತಹಂತವಾಗಿ ಕಲಾವಿದರಾಗಿ ರೂಪುಗೊಳ್ಳುತ್ತಾರೆ.
ಹಿಂಬದಿ ನಟನೆ: ನಟನೊಬ್ಬ ನಟಿಸುವ ದೃಶ್ಯಗಳಲ್ಲಿ ಹಿಂದೆ ಮುಂದೆ ಬೇರೆ ಜನ, ಬೇರೆ ಕ್ರಿಯೆಗಳಲ್ಲಿ ತೊಡಗಿದ್ದರೆ, ನೈಜತೆ ಇರುತ್ತೆ. ಪಾತ್ರ ರಸ್ತೆಯಲ್ಲಿ ನಡೆಯುತ್ತಿದ್ದಾಗ, ಅಂಗಡಿ, ಹೋಟೆಲ್ ಗೆ ಹೋದಾಗ ನೈಜತೆ ಇರಲು, ಹಿಂಬದಿ ನಟನೆ ಅವಶ್ಯ. ಇಂತವರಿಗೆ ಕ್ಯಾಮರಾ, ಸಿನಿಮಾ ಬಗ್ಗೆ ತಿಳಿವಳಿಕೆ ಗೊತ್ತಿರಬೇಕು ಎಂಬುದೇನಿಲ್ಲ.
ವೃತ್ತಿನಿರತ ಕಲಾವಿದ: ಕಲೆ/ಅಭಿನಯವನ್ನೇ ವೃತ್ತಿ ಮಾಡಿಕೊಂಡವನೇ ವೃತ್ತಿ ಕಲಾವಿದ.
ಬೇರೆ ಕಲಾವಿದರಿಗಿಂತ ಇವನು ಭಿನ್ನ.
ಅಂದರೆ ಸಿನಿಮಾ ಇತಿಮಿತಿ, ಉತ್ತಮ ನಟನಾಗಲು ಯಾವ್ಯಾವ ಅರ್ಹತೆಗಳು ಬೇಕು ಎಂಬುದು ಗೊತ್ತಿರಬೇಕು.
ದೇಹದ ಪ್ರತಿ ಅಂಗದಲ್ಲು ಅರ್ಥ ಹೊಮ್ಮಿಸುವ ಕಲೆ, ಧ್ವನಿ ಏರಿಳಿತ ಕಲೆ ಸಾಧಿಸಿಕೊಂಡರಬೇಕಾಗುತ್ತೆ.