(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಸಹಾಯಕ್ಕೆಂದು ಮಹಿಳೆಯೊಬ್ಬಳನ್ನ ಕರೆದು ನಿರ್ಜನ ಪ್ರದೇಶದಲ್ಲಿ ಬಲವಂತವಾಗಿ ಚುಂಬಿಸಲು ಮುಂದಾದವನ ತುಟಿಯನ್ನೇ ಆಕೆ ತುಂಡರಿಸಿದ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ.
ಈ ಬಗ್ಗೆ ಚಾಮರಾಜ ನಗರ ಪೂರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಸ್ಥಳೀಯ ೨೩ -೨೫ ವರ್ಷದ ಮಹಿಳೆ ನಡೆದು ಬರುತ್ತಿದ್ದಾಗ ಅಪರಿಚಿತ ವ್ಯಕ್ತಿ ಮಡದಿಗೆ ಹೆರಿಗೆ ನೋವು ಸಹಾಯ ಮಾಡಿ ಎಂದು ಹೇಳಿದ್ದಾನೆ.
ಪರಿಚಿತರಲ್ಲದ ನಿಮ್ಮ ಮನೆಗೆ ಹೇಗೆ ಬರೋದು,ಆಗಲ್ಲ ಎಂದು ಮಹಿಳೆ ಹೇಳಿದರೂ ಆತ ಮನಕರಗುವಂತೆ ನಾಟಕವಾಡಿ, ಪುಸಲಾಯಿಸಿ ನಿರ್ಜನ ಪ್ರದೇಶದತ್ತ ಬೈಕ್ ಚಲಾಯಿಸಿದ್ದಾನೆ.ನಿರ್ಜನ ಪ್ರದೇಶದಲ್ಲಿ ಮಹಿಳೆಗೆ ಮುತ್ತಿಕ್ಕಲು ಮುಂದಾಗಿದ್ದಾನೆ.
ಅನುಮಾನಗೊಂಡ ಮಹಿಳೆ ಪ್ರತಿರೋದ ವ್ಯಕ್ತಪಡಿಸಿದ್ದಾರೆ,ಆದರೂ ಬಲವಂತವಾಗಿ ಚುಂಬಿಸಲು ಮುಂದಾದಾಗ ಆತನ ನಾಲಗೆ ತುಟಿ ಕತ್ತರಿಸಿ ಬಿದ್ದಿದೆ.
ಭಯದಿಂದ ಆತ ಪರಾರಿಯಾಗಿದ್ದ.
ಮಹಿಳೆಯ ದೂರು ಆದರಿಸಿ ರಾಮಸಮುದ್ರ ಪೊಲೀಸ್ ಠಾಣೆಯ ವೃತ್ತ ಆರಕ್ಷಕ ಶ್ರೀಕಾಂತ್ ಅವರು ತಾಂತ್ರಿಕ ವರ್ಗದ ಜತೆ ಸಿ.ಸಿ.ಕ್ಯಾಮರಾ ಪರಿಶೀಲಿಸಲಾಗಿ ಘಟನೆ ನಿಜವೆಂದು ಗೊತ್ತಾಗಿದೆ. ಸ್ಥಳೀಯ ಆಸ್ಪತ್ರೆ ವೈದ್ಯರ ಸಹಾಯದಿಂದ ಕೊನೆಗೂ ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರಂಭದಲ್ಲಿ ಪ್ರಕರಣ ಸಂಶಯಾಸ್ಪದವಾದರೂ ನೈಜತೆಯಿಂದ ಕೂಡಿದ್ದು ಸಂತ್ರಸ್ಥೆಯ ಧೈರ್ಯ, ಆತ್ಮ ರಕ್ಷಣೆಗಾಗಿ ಮಾಡಿಕೊಂಡ ರಕ್ಷಾಣಾತ್ಮಕ ಕಾರ್ಯಗಳನ್ನ ಶ್ಲಾಘಿಸಿದ್ದಾರೆ.