ಉಡುಪಿ: ಒಂದೇ ಕುಟುಂಬದ ನಾಲ್ಕು ಮಂದಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡಪಿ ಜಿಲ್ಲೆಯ ನೆಜಾರು ಬಳಿ ನಡೆದಿದೆ.
ಉಡುಪಿಯ ಸಂತೆಕಟ್ಟೆ ನೆಜಾರು ಬಳಿ ಈ ಹೇಯ ಘಟನೆ ನಡೆದಿದೆ.
ಹತ್ಯೆಯಾದವರು ತಾಯಿ ಮತ್ತು ಮೂರು ಮಕ್ಕಳು.
ಹಸೀನಾ(45) ಅಫ್ನಾನ್ (23) ಅಯ್ನಾಝ್ (21), ಅಸೀಮ್ (14) ಹತ್ಯೆಯಾದ ದುರ್ದೈವಿಗಳು.
ಭಾನುವಾರ ಬೆಳಿಗ್ಗೆ ಬಿಳಿ ಬಣ್ಣದ ಶರ್ಟ್ ಧರಿಸಿದ್ದ ಮಾಸ್ಕ್ ಕಟ್ಟಿಕೊಂಡಿದ್ದ ವ್ಯಕ್ತಿ ಏಕಾಏಕಿ ಹಸೀನಾ ಅವರ ಮನೆಗೆ ನುಗ್ಗಿದ್ದಾನೆ.
ಅದೇನಾಯಿತೊ ತಿಳಿಯದು ಮನೆಯೊಳಗಿಂದ ಕೂಗಾಟ ಕೇಳಿ ಹೊರಗಡೆ ಇದ್ದ ಮಕ್ಕಳು ಒಳಗೆ ಬಂದಿದ್ದಾರೆ.
ಅಷ್ಟರಲ್ಲಿ ಹಾಸೀನಾ ಹತ್ಯೆ ಆಗಿ ಹೋಗಿತ್ತು.ಇದನ್ನು ನೋಡಿದ ಮಕ್ಕಳನ್ನೂ ಆ ವ್ಯಕ್ತಿ ಕೊಂದು ಪರಾರಿಯಾಗಿದ್ದಾನೆ.
ಸುದ್ದಿ ಹರಡುತ್ತಿದ್ದಂತೆ ಇಡೀ ಉಡುಪಿ ಜನತೆ ಬೆಚ್ಚಿಬಿದ್ದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ಡಿ ವೈ ಎಸ್ ಪಿ ದಿನಕರ ಭೇಟಿ ನೀಡಿ ಪರಿಶೀಲಿಸಿದರು.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.