ಲೋಕಾಯುಕ್ತ ಬಲೆಗೆ ಎಎಸ್‌ಐ

ಮೈಸೂರು: ಜಿಲ್ಲೆಯ ಹೆಚ್ ಡಿ ಕೋಟೆ ಪೊಲೀಸ್ ಠಾಣೆ ಎಎಸ್‌ಐ ಶಕೀಲಾವತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಅವರು 3 ಸಾವಿರ ರೂ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.

ಸಾಲದ ಹಣ ವಾಪಸ್ಸು ಕೊಡಿಸುವುದಕ್ಕೆ ಲಂಚ ಪಡೆದ ಆರೋಪದ ಹಿನ್ನಲೆಯಲ್ಲಿ ಶಕೀಲಾವತಿ ಬಲೆಗೆ ಬಿದ್ದಿದ್ದಾರೆ.

ಕೆಂಡಗಣ್ಣ ನಾಯ್ಕ ಎಂಬುವವರು ನಾಗೇಂದ್ರ ಎಂಬುವರಿಗೆ 1.25ಲಕ್ಷ ಹಣ ಸಾಲ ನೀಡಿದ್ದರು.

25 ಸಾವಿರ ರೂ ವಾಪಸ್ಸು ನೀಡಿದ್ದರು 1 ಲಕ್ಷ ಬಾಕಿ ಇತ್ತು.ಬಾಕಿ ಹಣ ನೀಡಲು ನಾಗೇಂದ್ರ ಸತಾಯಿಸಿದ್ದರು.

ಹಾಗಾಗಿ ಹೆಚ್ ಡಿ ಕೋಟೆ ಠಾಣೆಗೆ ಕೆಂಡಗಣ್ಣ ದೂರು ನೀಡಿದ್ದರು.

ಈ ವೇಳೆ ಇಬ್ಬರನ್ನು ಕರೆಸಿ ಶಕೀಲಾವತಿ ಮಾತನಾಡಿಸಿದ್ದರು. ಹಣ ವಾಪಸ್ಸು ಕೊಡಿಸಲು 3 ಸಾವಿರಕ್ಕೆ‌ ಬೇಡಿಕೆ ಇಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಕೆಂಡಗಣ್ಣ ಸ್ವಾಮಿ ದೂರು ನೀಡಿದ್ದರು.

ಕಾರ್ಯೋನ್ಮುಖರಾದ ಲೋಕಾಯುಕ್ತ ಪೊಲೀಸ್‌ ಕಾರ್ಯಾಚರಣೆ ನಡೆಸಿ ಲಂಚ ಪಡೆಯುತ್ತಿದ್ದ ಶಕೀಲಾವತಿಯನ್ನು  ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.