ಮೈಸೂರು: ಮೈಸೂರಲ್ಲಿ ಸರಗಳ್ಳರ ಕಾಟ ಒಂದೆಡೆಯಾದರೆ ಮತ್ತೊಂದೆಡೆ ಮನೆಗಳ್ಳರ ಹಾವಳಿ ಇದರೊಂದಿಗೆ ಇದೀಗ ವಾಹನಗಳ ಬಿಡಿ ಭಾಗಗಳ ಕಳವು.
ಒಟ್ಟಿನಲ್ಲಿ ಒಂದಲ್ಲ ಒಂದು ಕಳವಿನಿಂದ ಸಾರ್ವಜನಿಕರು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಮೈಸೂರಲ್ಲಿ ನಿರ್ಮಾಣವಾಗಿದೆ.
ಹೆಬ್ಬಾಳು ಪೊಲೀಸ್ ಠಾಣೆಯ ಕೂಗಳೆಯಲ್ಲಿ ನಿಲ್ಲಿಸಲಾಗಿದ್ದ ಗೂಡ್ಸ್ ವಾಹನದ ಬಿಡಿಭಾಗಗಳನ್ನು ಕಳವು ಮಾಡಲಾಗಿದೆ.
ಗೂಡ್ಸ್ ವಾಹನದ ಎರಡು ಟೈರ್ ಗಳು ಹಾಗೂ ಮತ್ತೊಂದು ವಾಹನದ ಸ್ಟೆಪ್ನಿಯನ್ನು ಕಳ್ಳರು ಅಪಹರಿಸಿಕೊಂಡು ಹೋಗಿದ್ದಾರೆ.
ರಾತ್ರಿ ವಾಹನ ನಿಲ್ಲಿಸಿ ಹೋಗಿದ್ದ ಮಾಲೀಕರು ಬೆಳಗ್ಗೆ ಬಂದು ನೋಡಿದಾಗ ವಾಹನದ ಬಿಡಿಭಾಗಗಳು ಕಳು ಆಗಿರುವುದು ಪತ್ತೆ ಆಗಿದೆ.
ಈ ಬಗ್ಗೆ ಹೆಬ್ಬಾಳು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.