ಮೈಸೂರು: ಮೊಬೈಲ್ ವಿಚಾರಕ್ಕೆ ತಂದೆ ಪುತ್ರನನ್ನು ಕೊಂದಿರುವ ಘಟನೆ ಮೈಸೂರಿನ ಬನ್ನಿಮಂಟಪದಲ್ಲಿ ನಡೆದಿದೆ.
ಉವೇಜ್ (23) ಕೊಲೆಯಾದ ಮಗ.
ಆರೋಪಿ ತಂದೆ ಅಸ್ಲಂಪಾಷ ಪೊಲೀಸರ ಅತಿಥಿಯಾಗಿದ್ದಾರೆ.
ತಾಯಿಯ ಮೊಬೈಲ್ ಅನ್ನು ಅನುಮತಿ ಪಡೆಯದೇ ಉವೇಜ್ ಬಳಸಿದ್ದ.ಇದೇ ವಿಚಾರಕ್ಕೆ ಅಪ್ಪ, ಮಗನ ನಡುವೆ ಜಗಳವಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅಸ್ಲಂಪಾಷ ಚಾಕುವಿನಿಂದ ಮಗ ಉವೇಜ್ ಗೆ ಇರಿದಿದ್ದಾನೆ.
ವಿಷಯ ತಿಳಿದು ಎನ್.ಆರ್.ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ
ಅಸ್ಲಂಪಾಷಾ ನನ್ನ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.