ಮೈಸೂರು: ಸಾಹಿತ್ಯದ ಮೂಲಕ ಅಸ್ಪೃಶ್ಯತೆ ಹೊಗಲಾಡಿಸಿದ ಮಹಾನ್ ಪುರುಷ ಕನಕ ದಾಸರು ಎಂದು ಮಾಜಿ ಸಚಿವ ಎನ್. ಮಹೇಶ್ ನುಡಿದರು.
ಮೈಸೂರಿನ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ 536 ನೇ ಸಂತ ಶ್ರೇಷ್ಠ ಕನಕದಾಸರ ಜಯಂತಿಯ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಕನಕ ಜಯಂತಿ ಯನ್ನು ಸರ್ಕಾರದ ವತಿಯಿಂದ ಪ್ರಾರಂಭಿಸಿದ್ದು ಬಿ.ಜೆ.ಪಿ.ಸರ್ಕಾರ ಎಂದು ಹೇಳಿದರು.
ಕನಕ ದಾಸರ ತತ್ವ ಆದರ್ಶ ಸಿದ್ದಾಂತ ಎಲ್ಲ ಗುಣಗಳಿರುವುದು ಬಿಜೆಪಿ ಕಾರ್ಯಕರ್ತ ರಲ್ಲಿ ಎಂದು ತಿಳಿಸಿದರು.
ಜಾತಿ ವಿಷ ಬಿಜ ವನ್ನು ಹೋಗಲಾಡಿಸಲು, ಅಸ್ಪೃಶ್ಯತೆ ಹೋಗಲಾಡಿಸಲು ಶ್ರಮಿಸಿದ ಕನಕದಾಸರು ಧರ್ಮದ ದಾಸರಾಗಿದ್ದವರು ಎಂದು ತಿಳಿಸಿದರು.
ಬಿಜೆಪಿ ನಗರ ಅಧ್ಯಕ್ಷರೂ,ಶಾಸಕರಾದ ಟಿ.ಎಸ್.ಶ್ರೀ ವತ್ಸ,ಮುಖಂಡ ವಿಜಯ ಶಂಕರ್, ಜಿಲ್ಲಾ ಅಧ್ಯಕ್ಷೆ ಮಂಗಳ ಸೋಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದ ರಾಜು,ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ವಿಭಾಗ ಪ್ರಭಾರಿ ಮೈ.ವಿ ರವಿಶಂಕರ್, ಮಾಜಿ ಮಹಾ ಪೌರರಾದ ಶಿವಕುಮಾರ್, ಬಿ.ಪಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಳಾದ ಸೋಮ ಸುಂದರ್, ವಾಣೀಶ್ ಕುಮಾರ್, ಗಿರೀದರ್,ಹಿಂದುಳಿದ ವರ್ಗಗಳ ಅಧ್ಯಕ್ಷ ಜೋಗಿ ಮಂಜು,ಮಂಡಲ ಅಧ್ಯಕ್ಷ ರಘು, ಬಿ.ಎಂ.ಭಾನುಪ್ರಕಾಶ್,ಮಹೇಶ್ ಗೆಜ್ಜಗಳ್ಳಿ,ರಾಜ್ಯ ಪ್ರದಾನ ಕಾರ್ಯದರ್ಶಿ ಅನಿಲ್ ಥಾಮಸ್,ಜಯಶಂಕರ್,ಮಾಜಿ ನಗರಪಾಲಿಕೆ ಸದಸ್ಯರು ಗಳಾದ ಮಾ.ವಿ.ರಾಮಪ್ರಸಾಧ,ಪ್ರಮೀಳಾ ಭರತ್, ಸುಬ್ಬಯ್ಯ, ಕೆ.ಜೆ.ರಮೇಶ್, ಜಗದೀಶ್, ರಘು ಅರಸ್,ಶಂಕರ್, ಸಿಂಡಿಕೇಟ್ ಸದಸ್ಯರಾದ ಗೋಕುಲ್ ಗೋವರ್ಧನ,ಮಾಧ್ಯಮ ಸಂಚಾಲಕರಾದ ಮಹೇಶ್ ರಾಜ್ ಅರಸು,ಕೇಬಲ್ ಮಹೇಶ್, ಪ್ರದೀಪ್ ಕುಮಾರ್, ಪ್ರದಾನ ಕಾರ್ಯದರ್ಶಿ ಗಳದ ಗೋಪಾಲ್,ಮಣಿರತ್ನಂ,ಚಂದ್ರಪ್ಪ ರಾಜೇಂದ್ರ, ಕೃಷ್ಣಾ ಮತ್ತಿತರರು ಹಾಜರಿದ್ದರು.