ಚಾಮರಾಜನಗರ: ನಗರದಲ್ಲಿ ರಾತ್ರೋರಾತ್ರಿ 6 ಲಕ್ಷಕ್ಕೂ ಹೆಚ್ಚು ಹಣ ಕಳ್ಳತನ ನಡೆದಿರುವ ಘಟನೆ ಚಾಮರಾಜನಗರದ ಸಂತೇಮರಳ್ಳಿ ವೃತ್ತದ ಬಳಿ ಇರುವ ನಂದಿನಿ ಹಾಲಿನ ಮುಖ್ಯ ಕೇಂದ್ರದಲ್ಲಿ ನಡೆದಿದೆ.
ಇಬ್ಬರು ಯುವಕರಿಂದ ಈ ಕಳ್ಳತನ ನಡದಿದೆ.
ನಗರದ ಚಿಕ್ಕ ಅಂಗಡಿ ಬೀದಿಯಲ್ಲಿರುವ ನಂದಿನಿ ಹಾಲಿನ ಕೇಂದ್ರಕ್ಕೆ ಒಬ್ಬ ಕಳ್ಳ ಹೊರಗಿದ್ದು ಮತ್ತೊಬ್ಬ ಕಳ್ಳ ಒಳಗೆ ನುಗ್ಗಿ ಕಂತೆ ಕಂತೆ ಹಣ ಲಪಟಾಯಿಸಿದ್ದಾನೆ.
ಹಣ ಕಳವು ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಶ್ವಾನ ದಳದೊಂದಿಗೆ ಪಟ್ಟಣ ಪೋಲೀಸರು ದೌಡಾಯಿಸಿ ಪರಿಶೀಲನೆ ಕಾರ್ಯ ನಡೆಸಿದ್ದಾರೆ.