ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿ:ಪುಷ್ಪಾ ಚಿತ್ರದ ಸಾಂಗ್ ಮೂಲಕ ಟ್ರೋಲ್

ಮೈಸೂರು: ಭವಾನಿ ರೇವಣ್ಣ ಅವರ ಕಾರಿಗೆ ಬೈಕ್ ಢಿಕ್ಕಿ ಹೊಡೆದ ಪ್ರಕರಣದ ದೃಶ್ಯ ವೈರಲ್ ಆದ ಬೆನ್ನಲ್ಲೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಬಗ್ಗೆ ಯುವಕನೊಬ್ಬ ಹಾಡು ಮಾಡಿ ಟ್ರೋಲ್ ಮಾಡಿದ್ದು ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ.

ಅಜಿತ್ ಬೊಪ್ಪಳ್ಳಿ ಎಂಬ ಯುವಕ ಟ್ರೋಲ್ ಮಾಡಿದ್ದು,ಪುಷ್ಪಾ ಚಿತ್ರದ ನೋಟ ಬಂಗಾರವಾಯಿತೆ… ಹಾಡಿನ ಟ್ಯೂನ್ ಬಳಸಿಕೊಂಡು ಹಾಡು ಹಾಡಿದ್ದಾರೆ.

ಈ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕು ರಾಂಪುರ ಗ್ರಾಮದ ಬಳಿ ಅಪಘಾತ ನಡೆದಿತ್ತು.

ಆಗ ಬೈಕ್ ಸವಾರನಿಗೆ ಭವಾನಿ ರೇವಣ್ಣ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.