ಅನಧಿಕೃತ ಕ್ಲಿನಿಕ್ ಗಳಿಗೆ ಶಾಕ್ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ

ಮೈಸೂರು: ಮೈಸೂರಿನಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ ವಿವಿಧಡೆ ದಾಳಿ ನಡೆಸಿ ಅನಧಿಕೃತ ಕ್ಲಿನಿಕ್ ಗಳವರಿಗೆ ಭಾರೀ ಶಾಕ್ ನೀಡಿದೆ.

ಮೈಸೂರಿನ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಅನಧಿಕೃತ ಕ್ಲಿನಿಕ್ ಗಳಿವೆ ಎಂದು ಡಾ. ಡಿ ಹೆಚ್ ಒ ಕುಮಾರಸ್ವಾಮಿ ತಿಳಿಸಿದ್ದಾರೆ

ಕಳೆದ ಎರಡು ದಿನಗಳಿಂದ ಅನಧಿಕೃತ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದು ಇದುವರೆಗೆ 15 ಕ್ಲಿನಿಕ್ ಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.

ಅನುಮತಿ ಪಡೆದ ಕ್ಲಿನಿಕ್ ಗಳ ಮೇಲು ಸಹ ದಾಳಿ ನಡೆಸಿ, ಸ್ವಚ್ಛತೆ ಸರಿಯಿಲ್ಲದ ಕ್ಲಿನಿಕ್ ನವರಿಗೂ ಸಹ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ‌.

ಹತ್ತಕ್ಕೂ ಹೆಚ್ಚು ಕ್ಲಿನಿಕ್ ಗಳಲ್ಲಿ ಸ್ವಚ್ಛತೆ ಇಲ್ಲದ ಬಗ್ಗೆ ಪ್ರಶ್ನಿಸಿ ಕ್ಲಿನಿಕ್ ಮಾಲೀಕರುಗಳಿಗೆ ನೋಟಿಸ್ ನೀಡಲಾಗಿದೆ.

ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ನೂರಾರು ಅನಧಿಕೃತ ಕ್ಲಿನಿಕ್ ಗಳಿದ್ದು ಅವುಗಳನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿ ಹೆಚ್ ಒ ತಿಳಿಸಿದ್ದಾರೆ

ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ವೈದ್ಯಕೀಯ ತಂಡ ಇನ್ನು ಹತ್ತರಿಂದ 15 ದಿನಗಳ ಕಾಲ ಅನಧಿಕೃತ ಕ್ಲಿನಿಕ್ ಗಳ ವಿರುದ್ಧ ದಾಳಿ ಮುಂದುವರಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.