ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ತರಾಟೆಗೆ ತೆಗೆದುಕೊಂಡ ಆರ್.ಅಶೋಕ್

ಮಂಡ್ಯ: ಹೆಣ್ಣು ಭ್ರೂಣ ಹತ್ಯೆ ಹಾಗೂ ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿರುವ ಪ್ರಕರಣಗಳನ್ನು ವಿರೋಧಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದಿರು ಶನಿವಾರ ಬಿಜೆಪಿ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ತರಾಟೆಗೆ ತೆಗೆದುಕೊಂಡರು.

ಭ್ರೂಣ ಲಿಂಗ ಪತ್ತೆ ನಡೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿದ್ದೇನೆ,
ಆಲೆಮನೆ ಯತಾಪ್ರಕಾರ ನಡೆಯುತ್ತಿದೆ,
ಮಹಜರ್ ಮಾಡಿ ಸರ್ಕಾರದ ಸೀಲ್ ಹಾಕಬೇಕಿತ್ತು ಎಂದು ಹೇಳಿದರು.

ಈ ಜಾಗದಲ್ಲಿ ಏನು ಕ್ರಮ ಆಗಿಲ್ಲ,
ಸಾಕ್ಷಿಗಳು ನಾಶ ಆಗಿದೆ,
ಕೋರ್ಟ್‌ಗೆ ಬೇಕಾದ ಎವಿಡೆನ್ಸ್ ಏನು ಸಿಗುವುದಿಲ್ಲ,ಪೊಲೀಸರ ನಿರ್ಲಕ್ಷ್ಯ ಸ್ಪಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃತ್ಯಕ್ಕೆ ಬಳಸಿರುವ ಯಾವುದೇ ವಸ್ತು ಇಲ್ಲಿ ಇಲ್ಲ, ಎಲ್ಲಾ‌ ಕ್ಲೀನ್ ಮಾಡಿದ್ದಾರೆ.
ವೈದ್ಯರು ವರ್ಷಕ್ಕೆ 600-700 ಭ್ರೂಣ ಹತ್ಯೆ ಮಾಡುತ್ತಿದ್ದರು,
ಈ ದಂಧೆಯಿಂದ ಕೋಟಿ ಕೋಟಿ ಹಣ ಸಂಪಾದಿಸಿದ್ದಾರೆ.
ವ್ಯವಸ್ಥಿತವಾದ ಜಾಲ ಇದರ ಹಿಂದೆ ಕೆಲಸ ಮಾಡಿದೆ.

ಅಧಿಕಾರಿಗಳು ನಾನು ಬಂದಿದ್ದೇನೆ ಎಂದು ಬಂದಿದ್ದಾರೆ.
ನಮಗೂ ಇದಕ್ಕೂ ಸಂಬಂಧ ಇಲ್ಲ,ಸಿಐಡಿ ತನಿಖೆ ಮಾಡುತ್ತೆ ಅಂತಾರ,
ರಾಜ್ಯಾದ್ಯಂತ ಸುದ್ದಿಯಾದರೂ ಈವರೆಗೆ ಆಲೆಮನೆ ಸೀಜ್ ಆಗಿಲ್ಲ ಎಂದು ಅಶೋಕ್ ಗುಡುಗಿದರು.

ವಿರೋಧ ಪಕ್ಷದ ನಾಯಕನಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೀನಿ ಎಂದು ತಿಳಿಸಿದರು.

ಇದೇ‌ ವೇಳೆ ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿರುವ ಪ್ರಕರಣಕ್ಕೆ‌ ಪ್ರತಿಕ್ರಿಯಿಸಿದ‌ ಅಶೋಕ್ ಇದು ಇಡೀ ನಾಡಿನ ಜನ ತಲೆತಗ್ಗಿಸುವ‌‌ ವಿಚಾರ‌ ಎಂದು ಹೇಳಿದರು.

ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು‌ ಸಂತ್ರಸ್ತೆಯೊಂದಿಗೆ ಸರ್ಕಾರ‌ ನಿಲ್ಲಬೇಕು ಆಕೆಗೆ ನ್ಯಾಯ ಸಿಗಬೇಕು‌ ಎಂದು ‌ಆಗ್ರಹಿಸಿದರು.

ರಾಜ್ಯ‌ ಸರ್ಕಾರ ಎಲ್ಲದರಲ್ಲೂ ವಿಫಲವಾಗಿದೆ ಎಂದು ಕಿಡಿಕಾರಿದರು.