ಪತಿ ಎದುರೇ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನ

ಮೈಸೂರು: ಎಲ್ಲೆಡೆ ಕಾಮುಕರ ಅಟ್ಟಹಾಸ ಮೇರೆ ಮೀರುತ್ತಿದ್ದು ಇಂತಹ ಹೇಯ,ನೀಚ ಘಟನೆಗಳಿಗೆ ಕಡಿವಾಣ ಬೀಳುವ ಅತ್ಯಗತ್ಯವಿದೆ.

ಇಂತಹ ನೀಚ‌ ಕೃತ್ಯ ನಂಜನಗೂಡು ತಾಲೂಕಿನಲ್ಲಿ ನಡೆದಿದ್ದು ಮಹಿಳೆಯರು ‌ಆತಂಕಕ್ಕೆ ಒಳಗಾಗಿದ್ದಾರೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕಾಮುಕನೊಬ್ಬ ಆಕೆಯ ಪತಿ ಎದುರೇ ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ.

ರಕ್ಷಣೆಗೆ ಬಂದ ಪತಿ ಮೇಲೆ ಕಾಮುಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಗಾಯಗೊಂಡ ದಂಪತಿಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊಸಕಡಜೇಟಿ ಗ್ರಾಮದ ದಂಪತಿ ಕಂದೇಗಾಲದ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ತೋಟದ ಮನೆಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾದ ಹಿನ್ನಲೆ ಫ್ಯೂಸ್ ಹಾಕಲು ಪತಿ ತೆರಳಿದಾಗ ಏಕಾಏಕಿ ನುಗ್ಗಿದ ಕಾಮುಕ ನವೀನ ಮಹಿಳೆಯನ್ನ ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಪತ್ನಿಯ ಕೂಗಾಟ ಕೇಳಿ ಪತಿ ಧಾವಿಸಿದಾಗ ಆತನ ಎದುರೇ ಮಹಿಳೆಯನ್ನು ಎಳೆದಾಡಿದ್ದಾನೆ.

ಅಲ್ಲದೆ ಕುಡುಗೋಲಿನಿಂದ ಪತಿ,ಪತ್ನಿ ಮೇಲೆ ಹಲ್ಲೆ ಮಾಡಿ ಆರೋಪಿ ನವೀನ್ ಪರಾರಿಯಾ ಗಿದ್ದಾನೆ.

ಹುಲ್ಲಹಳ್ಳಿ ಠಾಣೆ ಪಿ ಎಸ್ ಐ ರಮೇಶ್ ಕರ್ಕಿಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ  ದಂಪತಿಯಿಂದ ಮಾಹಿತಿ ಪಡೆದು ದೈರ್ಯ ತುಂಬಿದ್ದಾರೆ.

ಕಾಮುಕ ನವೀನ್ ಬಂಧಿಸಲು ಹುಲ್ಲಹಳ್ಳಿ  ಪೊಲೀಸರು ಕ್ರಮ ಕೈಗೊಂಡಿದ್ದಾರೆ.