ಮೈಸೂರು: ಸಿಮೆಂಟ್ ಇಟ್ಟಿಗೆಯಿಂದ ವ್ಯಕ್ತಿಯ ತಲೆಯನ್ನ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 30 ವರ್ಷದ ವ್ಯಕ್ತಿಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯನ್ನ ಎತ್ತಿಹಾಕಿ ಕೊಲೆ ಮಾಡಲಾಗಿದೆ.
ಹುಣಸೂರಿನ ಅರಸು ಪ್ರತಿಮೆ ವೃತ್ತದ ಬಳಿ ಇರುವ ಸಿಮೆಂಟ್ ಇಟ್ಟಿಗೆ ತಯಾರಿಸುವ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ.
ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ,ಹುಣಸೂರು ಟೌನ್ ಇನ್ಸ್ ಪೆಕ್ಟರ್ ದೇವೇಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆಯಾದ ವ್ಯಕ್ತಿಯಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಮೀಪದಲ್ಲಿರುವ ಸಿಸಿ ಕ್ಯಾಮರಾ ಪುಟೇಜ್ ಪರಿಶೀಲನೆ ನಡೆಸುತ್ತಿದ್ದು,ತನಿಖೆ ಪ್ರಾರಂಭಿಸಿದ್ದಾರೆ.