ಅರ್ಚಕ ಸೇರಿ ಮೂವರ ಕೊಲೆ: ದೇಗುಲ ಹುಂಡಿ, ಚಿನ್ನಾಭರಣ ಕಳುವು

ಮಂಡ್ಯ: ದೇವಸ್ಥಾನದ ಹುಂಡಿ ಕಳವಿಗೆ ಬಂದ ಕಳ್ಳರು ದೇಗುಲದ ಅರ್ಚಕ ಸೇರಿ ಮೂವರನ್ನು ಕೊಲೆ ಹುಂಡಿ, ಚಿನ್ನಾಭರಣ ಕಳುವು ಮಾಡಿಕೊಂಡು ಹೋಗಿರುವ ದುರ್ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಈ ಘಟನೆಯು ಮಂಡ್ಯದ ಹೊರ ವಲಯದ ಅರ್ಕೇಶ್ವರ ದೇವಾಲಯದಲ್ಲಿ ನಡೆದಿದೆ.
ದೇವಾಲಯದ ಅರ್ಚಕರಾದ ಗಣೇಶ (55), ಪ್ರಕಾಶ (58) ಮತ್ತು ಆನಂದ(40) ಕೊಲೆಯಾದವರು.
ದೇವಾಲಯದ ಹುಂಡಿ ಕಳವಿಗೆ ಬಂದ ದುಷ್ಕರ್ಮಿಗಳು ದೇವಾಲಯದಲ್ಲಿ ಮಲಗಿದ್ದ ಮೂವರನ್ನು ಕೊಲೆ ಮಾಡಿ ಚಿನ್ನ-ಬೆಳ್ಳಿ ಆಭರಣದೊಂದಿಗೆ ಹುಂಡಿಯನ್ನು ಹೊತ್ತೊಯ್ದಿದ್ದಾರೆ.
ಕಳೆದ 8 ತಿಂಗಳಿನಿಂದ ದೇವಾಲಯದ ಹುಂಡಿಯನ್ನು ತೆಗೆದು ಹಣ ಎಣಿಕೆ ಮಾಡಿರಲಿಲ್ಲ ಎನ್ನಲಾಗಿದೆ.
ಮಂಡ್ಯ ಪೂರ್ವ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.