ಮೈಸೂರು: ಉತ್ತರ ದ್ವಾರ ದರ್ಶನ ಎಂದರೆ ಪಿತೃ ದೇವತೆಗಳೆಲ್ಲರೂ ಮತ್ತು ಮಹಾತ್ಮರೆಲ್ಲರೂ ಕಾದುಕೊಂಡಿರುವ ದಿನ,ಸ್ವಾಮಿ ಯೋಗದಿಂದ ಏಳುವ ದಿನ ಎಂದು ಅವಧೂತ ದತ್ತಪೀಠದ ಪೀಠಾಧಿಪತಿ ಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ನಾಡಿನ ಜನತೆಗೆ ವೈಕುಂಠ ಏಕಾದಶಿಯ ಆಶೀರ್ವಚನ ನೀಡಿ ಮಾತನಾಡಿರುವ ಶ್ರೀಗಳು ಉತ್ತರ ದ್ವಾರ ದರ್ಶನ ಎಂದರೆ ಸ್ವಾಮಿಯು ಯೋಗವನ್ನು ಮುಗಿಸಿ ಬಾಗಿಲು ತೆರೆಯುವ ದಿನವಾಗಿದೆ ಇದು ಅತ್ಯಂತ ಪವಿತ್ರ ದಿನ ಎಂದು ಹೇಳಿದರು.
ಇಂತಹ ಪವಿತ್ರ ದಿನದಂದು ಭಗವಂತನ ಧ್ಯಾನ ಮಾಡುತ್ತಾ ಮನೆ ದೇವರನ್ನು ಸ್ಮರಿಸಿ, ಗೋವಿಂದ ನಾಮಸ್ಮರಣೆ ಮಾಡುತ್ತಾ ಧ್ಯಾನ ಮಾಡಿದರೆ ಭಗವಂತ ನಮಗೆ ಜೀವನದ ದಾರಿ ತೋರುತ್ತಾರೆ ಎಂಬ ಪ್ರತಿತಿಯಿದೆ ಎಂದು ಹೇಳಿದರು.
ಹಾಗಾಗಿ ಈ ದಿನ ಭಗವಂತನ ನಾಮಸ್ಮರಣೆ ಯೊಂದಿಗೆ ಪ್ರಾಣಿ ಪಕ್ಷಿಗಳಿಗೆ ಮತ್ತು ಬಡ ಜನರಿಗೆ ಸ್ವಲ್ಪವಾದರೂ ಅನ್ನದಾನ ಮಾಡಿದರೆ ಸಕಲ ಶುಭ, ಸಕಲ ಮಂಗಳ ಪ್ರಾಪ್ತವಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
ಕನ್ನಡ ನಾಡಿನ ಇಡೀ ಪ್ರಜೆಗಳಿಗೆ ದೇವರು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಈ ವೈಕುಂಠ ಏಕಾದಶಿಯ ಶುಭದಿನ ಎಲ್ಲರಿಗೂ ಒಳಿತಾಗಲಿ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿದ್ದಾರೆ.
ನಮ್ಮಲ್ಲಿ ನಾಲ್ಕೈದು ಕಡೆ ವೆಂಕಟರಮಣ ಸ್ವಾಮಿ ಸ್ಥಾಪನೆ ಮಾಡಿದ್ದೇವೆ, ಆದರೂ ಈ ಬಾರಿ ಮೈಸೂರಿನಲ್ಲಿ ನಾವು ಇರಬೇಕೆಂಬ ಸಂಕಲ್ಪ ಆಗಿರುವುದರಿಂದ ಈ ವರ್ಷ ಮೈಸೂರಿನಲ್ಲೇ ಇದ್ದು ಸ್ವಾಮಿಯ ಉತ್ತರ ದ್ವಾರದಶನ ಮಾಡುತ್ತಿದ್ದೇವೆ ಎಂದು ತಿಳಿಸಿದರು.