(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಚಾಮರಾಜನಗರ ಪೊಲೀಸ್ ಪೇದೆಯೊಬ್ಬನನ್ನು ಮೈಸೂರು ಗ್ರಾಮಾಂತರ ಪೊಲೀಸರು ಜೈಲಿಗೆ ಕಳಿಸಿದ್ದಾರೆ.
ಚಾಮರಾಜನಗರ ಸಶಸ್ತ್ರ ಮೀಸಲು ಪಡೆಯ ಪೇದೆ ಮಹೇಶ್ ಹಾಗೂ ಸಹಕರಿಸಿದ ಮತ್ತೊಬ್ಬನ್ನು ಜೈಲಿಗಟ್ಟಿದ್ದಾರೆ.
ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು ಮೈಸೂರು ಗ್ರಾಮಾಂತರ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇಲಾಖೆಯೊಳಗೆ ಇಂತಹ ಕುಕೃತ್ಯಕ್ಕೆ ಪರೋಕ್ಷವಾಗಿ ಕಾರಣರಾದ ಡಿವೈಸ್ಪಿ ಅವರ ಮೇಲೆ ಕ್ರಮ ಏಕಿಲ್ಲ ಎಂಬ ಪ್ರಶ್ನೆ ಸಿಬ್ಬಂದಿಗಳ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.
ಘಟನೆ: ಚಾಮರಾಜನಗರ ಸಶಸ್ತ್ರ ಮೀಸಲು ಪಡೆಯ ಪೇದೆ ಮಹೇಶ್ ಆತನ ಸಂಗಡಿಗರು ಕಾರು ಪಡೆದು ಆತನ ಸೋದರ ಮಾವವನ್ನ ವರುಣಾ ಠಾಣಾ ವ್ಯಾಪ್ತಿಯಲ್ಲಿ ಕಾರಿನೊಳಗೆ ಕೊಲೆ ಮಾಡಿ ಕೂಡನಹಳ್ಳಿ ಸಮೀಪದ ರಸ್ತೆಯಲ್ಲಿ ಬಿಸಾಡಿದ್ದರು.
ನಂತರ ಏನೂ ತಿಳಿಯದಂತೆ ನಾಪತ್ತೆಯಾವದರ ದೂರುದಾರರ ಜೊತೆ ಪೇದೆಯೂ ಸೇರಿ ಹುಡುಕಾಟ ಆರಂಭಿಸಿದ್ದ.
ಮೈಸೂರು ಗ್ರಾಮಾಂತರ ಪೊಲೀಸರಿಗೆ ಸಿಕ್ಕ ಶವ ಮೇಲ್ನೊಟಕ್ಕೆ ಕೊಲೆಯಾದಂತೆ ಕಂಡು ಬಂದದ್ದರಿಂದ ಪ್ರಕರಣ ಗಂಬೀರವಾಗಿ ಪರಿಗಣಿಸಿ ಹುಡುಕಿದಾಗ ಕೊಲೆ ಮಾಡಿದವರ ಜಾಡು ಪತ್ತೆ ಮಾಡಿ ಆರೋಪಿಗಳನ್ನ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ತ್ರೀ ವ್ಯಾಮೋಹವೆ ಸೋದರ ಮಾವನ ಕೊಲೆಗೆ ಕಾರಣ ಎಂದು ತಿಳಿದುಬಂದಿದ್ದು ಸೋದರ ಮಾವನ ಮಗಳನ್ನ ಇಷ್ಟಪಡುತ್ತಿದ್ದು ಆಕೆ ವಿವಾಹವಾಗಿ ವಿದೇಶಕ್ಕೆ ಹೋಗಬಹುದಾದದ ಹಿನ್ನಲೆಯಲ್ಲಿ ಆಕೆಯನ್ನ ವಿದೇಶಕ್ಕೆ ಹೋಗುವುದನ್ನ ತಪ್ಪಿಸಲು ಆಕೆ ಇಷ್ಟಪಡುತ್ತಿದ್ದ ಅಪ್ಪ ನಿವೃತ್ತ ಶಿಕ್ಷಕ ನಾಗರಾಜು ಅವರನ್ನ ಸಾಯಿಸಿದರೆ ಹೇಗೆ ಎಂಬ ಲೆಕ್ಕಾಚಾರ ಹಾಕಿ ಆತನ ಕಥೆ ಮುಗಿಸಿದ್ದಾರೆ.
ವಿಪರ್ಯಾಸವೆಂದರೆ ಆಕೆಗೆ ಈತನು ಇಷ್ಟವಿರಲಿಲ್ಲ,ಈತ ವಿವಾಹವಾಗಿದ್ದರೂ ಒನ್ ಸೈಡ್ ಲವ್ ಗೆ ತನ್ನ ಸೋದರ ಮಾವನನ್ನ ಕೊಲೆ ಮಾಡಿರುವುದು ದುರಂತ.
ಬಹಳ ಕ್ಲಿಷ್ಟಕರವಾದ ಈ ಕೊಲೆಪ್ರಕರಣ ಭೇದಿಸಲು ಪೊಲೀಸರ ಪಟ್ಟ ಸಾಹಸ ಅಷ್ಟಿಷ್ಟಲ್ಲ.
ಮೊಬೈಲ್ ನೆಟ್ ವರ್ಕ್ ಕೂಡ ಸಿಗದ ಹಾಗೆ ಚಾಣಕ್ಷತನ ಮೆರೆದ ಈ ಪೊಲೀಸ್ ಪೇದೆಯನ್ನ ಎಸ್ಪಿ ಸೀಮಾ ಲಾಟ್ಕರ್ ಅವರ ಮಾರ್ಗದರ್ಶನದಲ್ಲಿ
ಮೈಸೂರು ಗ್ರಾಮಾಂತರ ವ್ಯಾಪ್ತಿಯ ಆರಕ್ಷಕ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ, ವರುಣಾ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಚೇತನ್ ,ಸೆನ್ ವಿಭಾಗದ ಆರಕ್ಷಕ ನಿರೀಕ್ಷಕ ಪುರುಷೋತ್ತಮ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ.
ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಮಹೇಶ್ ಸತತವಾಗಿ ಏಳೆಂಟು ವರ್ಷಗಳ ಕಾಲ ಜಿಲ್ಲಾ ಕೇಂದ್ರದಲ್ಲಿ ಇರದೆ ಮೇಲಾದಿಕಾರಿ ಡಿವೈಸ್ಪಿ ಅವರಿಗೆ ಆಮೀಷವೊಡ್ಡಿ ತಾನು ಬೇರೆ ಬೇರೆ ಚಟುವಟಿಕೆಗಳನ್ನು ರಾಜಾರೋಷವಾಗಿ ಮಾಡಿಕೊಂಡಿದ್ದ.
ಈ ಕೊಲೆಯ ಸಂದರ್ಭದಲ್ಲೂ ಆತ ಕೊಲೆಯಾದ ಸ್ಥಳದಲ್ಲಿ ಇದ್ದರೂ ಚಾಮರಾಜನಗರ ಶಸಸ್ತ್ರ ಮೀಸಲು ಪಡೆಯ ಹಾಜರಾತಿಯಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ಇಲಾಖೆಯ ಮೇಲಾದಿಕಾರಿಗಳಾದ ರಕ್ಷಣೆಗೆ ನಿಂತಿಧ್ದು ವಿಪರ್ಯಾಸ.
ಮೇಲಾದಿಕಾರಿಗಳು ಟವರ್ ಲೋಕೆಷನ್ ಹಾಗೂ ಸಿಡಿಆರ್ ತನಿಖೆ ಮಾಡಿ ಆತನಿಗೆ ಅನದಿಕೃತ ಗೈರು ಹಾಜರಿ ಸಂಬಂದ ಎಚ್ಚರಿಕೆ ನೀಡಿದ್ದರೆ ಈ ಕೊಲೆ ತಪ್ಪಿದಂತಾಗುತ್ತಿತ್ತು.
ಈಗಾಗಲೆ ವಿವಿದ ಪ್ರತ್ಯೇಕ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದ ಇಬ್ಬರು ಪೇದೆಗಳನ್ನ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಪದ್ಮಿನಿ ಸಾಹೊ ಅವರು ತಿಳಿಸಿದ್ದಾರೆ.