ಮೈಸೂರು: ನಂಜನಗೂಡು ರಾಷ್ಟ್ರಪತಿ ರಸ್ತೆ ಯಲ್ಲಿ ಇರುವ ಭಾ.ಜ.ಪ.ಕಾರ್ಯಾಲಯದಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಅಟಲ್ ಜೀ ಅವರ ಭಾವಚಿತ್ರಕ್ಕೆ ಮೈಸೂರು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶ್ರೀ ವತ್ಸ ಅವರು ಅಟಲ್ ಜೀ ಅವರ ಜನ್ಮದಿನವನ್ನು ಸುಶಾಸನ ದಿನಾಚರಣೆಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ದೇಶದ ರಸ್ತೆ ಸಂಪರ್ಕ, ನದಿ ಜೋಡಣೆ,ರೈಲ್ವೆ ಸಂಪರ್ಕ,ರಾಜ್ಯಗಳ ಜೋಡಣೆಯಂತಹ ನೂರಾರು ಯೋಜನೆಯನ್ನು ತಂದ ಮಹಾನ್ ನಾಯಕ,ಅಟಲ್ ಜೀ ಅಜಾತ ಶತ್ರು ವಾಗಿದ್ದರು ಎಂದು ಸ್ಮರಿಸಿದರು.
ನಮ್ಮ ಪಕ್ಕದ ರಾಷ್ಟ್ರ ಪಾಕಿಸ್ತಾನಕ್ಕೆ ಬಸ್ ಸಂಪರ್ಕ ಮಾಡಿ ಬಾಂಧವ್ಯಕ್ಕೆ ಕಾರಣೀಬೂತರಾದವರು,
ನಮ್ಮಂತಹ ಕೋಟ್ಯಾಂತರ ಕಾರ್ಯಕರ್ತರ ಮಹಾನ್ ಪುರುಷ ಎಂದು ಬಣ್ಣಿಸಿದರು.
ಪರ್ತಕರ್ತರಾಗಿ,ಮಹಾ ಕವಿಯಾಗಿ,ವಾಗ್ಮಿಗಳಾಗಿ,ಸ್ವಯಂ ಸೇವಕರಾಗಿ,ದೇಶ ಕಂಡ ಅಪ್ರತಿಮನಾಯಕರಾಗಿದ್ದರು ಎಂದು ಶ್ರೀವತ್ಸ ಹೇಳಿದರು.
ನಿಕಟ ಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಂಡಲ ಅಧ್ಯಕ್ಷ ಮಹೇಶ,ಶ್ರೀನಿವಾಸರೆಡ್ಡಿ,
ನಗರಸಭಾ ಮಾಜಿ ಅಧ್ಯಕ್ಷ ಹೆಚ್. ಎಸ್ ಮಹದೇವಸ್ವಾಮಿ, ನಗರಸಭಾ ಸದಸ್ಯರಾದ ಕಪೀಲೇಶ್,ಮಹದೇವಪ್ರಸಾದ್,ಆನಂದ್,ಮುಖಂಡರುಗಳಾದ ಕೃಷ್ಣಪ್ಪಗೌಡ್ರು,ಪ್ರೇಮ ಶಂಭಯ್ಯ,ಅಭ್ಯರ್ಥಿ ಮಹೇಶ್ ಅತ್ತಿಖಾನೆ ,ಸಂಜಯಶರ್ಮ,ಚಂದ್ರು,ಕೃಷ್ಣಪ್ಪ, ಇಬಸವಣ್ಣ, ಮಹೇಶ್, ಬಾಲಚಂದ್ರು ಮುಂತಾದವರು ಹಾಜರಿದ್ದರು.