ಮೈಸೂರು: ಶ್ರೀ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಶ್ರೀ ರಾಜರಾಜೇಶ್ವರಿ ದೇವಿ ಪ್ರತಿಷ್ಠಾಪನೆ ಮತ್ತು ಶ್ರೀಹರಿ ಸನ್ನಿಧಿ ಉದ್ಘಾಟನಾ ಕಾರ್ಯಕ್ರಮ ಗುರುವಾರ ವೈಭವದಿಂದ ನೆರವೇರಿತು
ಇಂದು ಬೆಳಗ್ಗೆ 9 ಗಂಟೆಗೆ ಪ್ರತಿಷ್ಠ ಹೋಮ, ಶಾಂತಿ ಪೌಷ್ಟಿಕ ಹೋಮ, ಮೂಲ ಮಂತ್ರ ಹೋಮ, ದುರ್ಗಾ ಸಪ್ತಶತಿ. 9.05ಕ್ಕೆ ಮಕರ ಲಗ್ನದಲ್ಲಿ ಸಹಸ್ರ ಸಾಲಿಗ್ರಾಮ ಸ್ಥಾಪನೆ ನೆರವೇರಿತು
ಮಧ್ಯಾಹ್ನ 12 ಗಂಟೆಗೆ ಮೀನ ಲಗ್ನದಲ್ಲಿ ಯಂತ್ರ ಪ್ರತಿಷ್ಠಾನ ಮಾಡಲಾಯಿತು.
ಶ್ರೀ ಹರಿ ಸನ್ನಿಧಿ ಉದ್ಘಾನೆ ನರವೇರಿತು. ಶ್ರೀ ಹರಿಸನ್ನಿಧಿ ಅತ್ಯಂತ ವಿಶೇಷವಾಗಿದೆ, ಅತ್ಯಂತ ಅಪರೂಪದ ಪ್ರಪಂಚದಲ್ಲಿ ಎಲ್ಲೂ ನೋಡಲಾಗದಂತ ವಿಶಿಷ್ಟ ಸಾಲಿಗ್ರಾಮಗಳನ್ನು ಶೇಖರಿಸಿ ಇಡಲಾಗಿದೆ.
ಆಶ್ರಮದ ಪ್ರಾರ್ಥನಾ ಮಂದಿರದ ಪ್ರಧಾನ ದ್ವಾರದ ಬಳಿ ಶ್ರೀಹರಿ ಸನ್ನಿಧಿ ಇದೆ, ಅನಂತನಾಗ ಶಯನದಲ್ಲಿ 2000 ಕ್ಕೂ ಹೆಚ್ಚು ಅತ್ಯಪರೂಪದ ಸಾಲಿಗ್ರಾಮಗಳನ್ನು ಸಂಗ್ರಹಿಸಿ ಇಡಲಾಗಿದೆ.
ಇದರ ಒಳಗೆ 300 ಕೆ.ಜಿ ತೂಕದ ತ್ರಿವಿಕ್ರಮ ಸಾಲಿಗ್ರಾಮ ಮತ್ತು ಮನೋರಥ ಕೂರ್ಮ ಸಾಲಿಗ್ರಾಮಗಳನ್ನು ಇಡಲಾಗಿದೆ.
ಹರಿ ಸನ್ನಿಧಿಯ ಮೇಲ್ಭಾಗದಲ್ಲಿ ವಿಶೇಷವಾದ ಸುದರ್ಶನ ಯಂತ್ರವನ್ನು ಮಾಡಲಾಗಿದೆ ಇದು ,ಪೂಜ್ಯ ಸ್ವಾಮೀಜಿಯವರ ಕಲ್ಪನೆ ಯಂತೆ ನಿರ್ಮಿಸಲಾಗಿದೆ.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಶ್ರೀಹರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ವಿಶ್ವಕ್ ಸೇನಾ ಸಾಲಿಗ್ರಾಮ, ಮೀನು ಮಾದರಿ ಸಾಲಿಗ್ರಾಮ, ಕೂರ್ಮ ಸಾಲಿಗ್ರಾಮ, ಲಕ್ಷ್ಮಿ ನಾರಸಿಂಹ ಸಾಲಿಗ್ರಾಮ, ಪರುಶುರಾಮ ಸಾಲಿಗ್ರಾಮ, ಶ್ರೀರಾಮ ಸಾಲಿಗ್ರಾಮ, ಮುರಾರಿ ಕೃಷ್ಣ ಸಾಲಿಗ್ರಾಮ ಹೀಗೆ ಹಲವಾರು ಸಾಲಿಗ್ರಾಮಗಳನ್ನು ಇಟ್ಟು ಶ್ರೀಗಳು ಪೂಜಿಸಿದರು.
ಶ್ರೀಮಾತಾ ರಾಜರಾಜೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ದೇವಿಗೆ ವಿವಿಧ ಅಭಿಷೇಕವನ್ನು ಶ್ರೀಗಳು ನೆರವೇರಿಸಿದರು.
ಇದೇ ವೇಳೆ ವಿವಿಧ ಹೋಮ ಕಾರ್ಯಗಳು ನೆರವೇರಿತು.ಹರಿಸನ್ನಿಧಿಯಲ್ಲಿ ಶ್ರೀಗಳು ಪೂರ್ಣಾಹುತಿ ನೆರವೇರಿಸಿದರು.ನಂತರ ಶಿಂಶುಮಾರ ದ್ರುವ ಮೂರ್ತಿಗೆ ಶ್ರೀಗಳು ಹೋಮ ರಕ್ಷೆ ಅರ್ಪಿಸಿದರು.
ನಂತರ ಕುಂಬಾಭಿಷೇಕ, ಬ್ರಹ್ಮ ಕಳಶ ಅಭಿಷೇಕ ನೆರವೇರಿಸಲಾಯಿತು.
3 ಗಂಟೆಗೆ ಧರ್ಮದರ್ಶನ ಇದ್ದುದರಿಂದ ಸಾವಿರಾರು ಭಕ್ತರು ಶ್ರೀಮಾತಾ ರಾಜರಾಜೇಶ್ವರಿ ಮೂರ್ತಿ ಹಾಗೂ ಶ್ರೀ ಹರಿಸನ್ನಿಧಿಯ ದರ್ಶನ ಪಡೆದು ಪುನೀತರಾದರು.