ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ: ಎನ್ ಆರ್ ಠಾಣಿಗೆ ಯುವತಿ ದೂರು

ಮೈಸೂರು: ವ್ಯಕ್ತಿಯೊಬ್ಬ ವಿವಾಹವಾಗುವುದಾಗಿ ನಂಬಿಸಿ ಯುವತಿಯ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ ಘಟನೆ

ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಮೈಸೂರು-ಬೆಂಗಳೂರು ರಸ್ತೆಯ ರಿಂಗ್ ರೋಡ್ ಬಳಿ ಇರುವ ಏಟ್ರಿಯಂ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.

ಹೋಟೆಲ್ ಮ್ಯಾನೇಜ್ಮೆಂಟ್ ನಡೆಸುವ ಪ್ರೀತಂ ಪುರಾಣಿಕ್ ಎಂಬಾತನ ವಿರುದ್ಧ ಅತ್ಯಾಚಾರ ಆರೋಪ ಮಾಡಲಾಗಿದೆ.

ಪ್ರೀತಂ ಪುರಾಣಿಕ್ ಹಾಗೂ ಆತನ ತಂದೆ ಕೃಷ್ಣದಾಸ್ ಪುರಾಣಿಕ್ ಎಂಬುವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ

ನೊಂದ ಯುವತಿ ಪ್ರೇಮಾ(27)(ಹೆಸರು ಬದಲಿಸಲಾಗಿದೆ) ದೂರು ನೀಡಿದ್ದಾರೆ.

ಕೆಲವು ವರ್ಷಗಳಿಂದ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರೇಮಾಳ ಜೊತೆ ಸಲುಗೆ ಬೆಳೆಸಿದ ಪ್ರೀತಂ ಪುರಾಣಿಕ್ ಮದುವೆ ಆಗುವುದಾಗಿ ನಂಬಿಸಿ ಬಲೆಗೆ ಹಾಕಿಕೊಂಡಿದ್ದ.

ಹೋಟೆಲ್ ನಲ್ಲೇ ಇದ್ದ ಸ್ಪಾ ಒಂದರಲ್ಲಿ ಮದುವೆ ಆದ ಪ್ರೀತಂ ಪುರಾಣಿಕ್ ಯುವತಿಯ ಇಚ್ಛೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ಬೆಳೆಸಿದ.

ಇದರಿಂದ ಗರ್ಭಿಣಿಯಾದ ಪ್ರೇಮ ಮದುವೆ ಆಗುವಂತೆ ಒತ್ತಾಯಿಸಿದಾಗ ಬಲವಂತವಾಗಿ ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದ ಎಂದು ‌ಆರೋಪಿಸಲಾಗಿದೆ.

ಕೆಲದಿನಗಳ ನಂತರ ಮತ್ತೆ ಮದುವೆ ಆಗುವ ನಾಟಕವಾಡಿ ಪ್ರೇಮಾಳ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಪುನಃ ದೈಹಿಕ ಸಂಪರ್ಕ ಬೆಳೆಸಿದ ಈ ಕಾಮುಕ.

ಪ್ರೇಮಾ ಮತ್ತೆ ಗರ್ಭವತಿಯಾಗಿದ್ದು ವಿವಾಹ ಆಗುವಂತೆ ಒತ್ತಾಯಿಸಿದ್ದಾಳೆ.ಈ ವೇಳೆ ಪ್ರೀತಂ ಪುರಾಣಿಕ್ ಹಾಗೂ ತಂದೆ ಕೃಷ್ಣದಾಸ್ ಪುರಾಣಿಕ್ ರವರು ಪ್ರೇಮಾಳಿಗೆ ಜಾತಿ ನಿಂದನೆ ಮಾಡಿ ಹೋಟೆಲ್ ನಿಂದ ಹೊರಗೆ ತಳ್ಳಿದ್ದಾರೆ.

ಗರ್ಭವತಿಯಾಗಿರುವ ಪ್ರೇಮಾ ತನ್ನನ್ನ ವಂಚಿಸಿದ ಪ್ರೀತಂ ಪುರಾಣಿಕ್ ಹಾಗೂ ಬೆಂಬಲ ನೀಡಿದ ತಂದೆ ಕೃಷ್ಣದಾಸ್ ಪುರಾಣಿಕ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನಗರದ ಎನ್.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.