ಪ್ಲೆಕ್ಸ್ ವಿರುದ್ಧ ಕಾರ್ಯಚರಣೆ ಮಾಡಿದ ಅಧಿಕಾರಿಗಳ ವಿರುದ್ದ ಪ್ರತಿಭಟನೆ

ಚಾಮರಾಜನಗರ: ನಗರದಲ್ಲಿ ಅನುಮತಿ ಪಡೆಯದ ಫ್ಲೇಕ್ಸ್ ಗಳನ್ನು ತೆರವುಗೊಳಿಸಿದ ನಗರಸಭೆ ಅಧಿಕಾರಿಗಳ ಕ್ರಮವನ್ನ ವಿರೊಧಿಸಿ ಪ್ರತಿಭಟನೆ ನಡೆಸಿದರು.

ಚಾಮರಾಜನಗರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಆಗಮಿಸುತ್ತಿರುವ ಹಿನ್ನೆಲೆ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಗಳನ್ನು  ರಾತ್ರೊರಾತ್ರಿ ಹಾಕಿದ್ದರು.

ಫ್ಲೇಕ್ಸ್ ಗಳನ್ನು ಹಾಕಲು ಅನುಮತಿ ಪಡೆದಿಲ್ಲ ಎಂದು ನಗರದ ಪಚ್ಚಪ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ, ಸಂತೇಮರಳ್ಳಿ ವೃತ್ತ, ಸುಲ್ತಾನ್ ಷರೀಫ್ ಸರ್ಕಲ್‌ ಹಾಗೂ ಡಿವಿಯೇಷನ್ ರಸ್ತೆಯಲ್ಲಿ ಫ್ಲೆಕ್ಸ್ ಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.

 ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ ನಗರಸಭೆ ವಿರುದ್ಧ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಜೋಡಿ ರಸ್ತೆ ಮಧ್ಯಭಾಗ ಹೊರತುಪಡಿಸಿ ಎಡ ಬಲಭಾಗದಲ್ಲಿ ಫ್ಲೆಕ್ಸ್ ಕಟ್ಟಲು ಅನುಮತಿ ಇದೆ. ಆದರೆ ಡಿವೈಡರ್ ಮದ್ಯ ಹಾಗೂ ಅನುಮತಿಪಡೆಯದೆ ದಾರಿಯುದ್ದಕ್ಕೂ ಕಟ್ಟಲಾಗಿತ್ತು.  ಈಗಾಗಲೆ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಿದೆ ಜೊತೆಗೆ ಜಿಲ್ಲಾಡಳಿತ  ಸೂಕ್ತ ಮಾರ್ಗಸೂಚಿ ನೀಡಿದೆ.

 ಅನುಮತಿ ಪಡೆದಿಲ್ಲ ಪಡೆದು ಕಟ್ಟಿದರೆ ನಾವೇಕೆ ತೆರವು ಮಾಡ್ತೆವೆ ಎಂದು ನಗರಸಭೆ ಅಧಿಕಾರಿಗಳು ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ್ದಾರೆ.

ಈ ವೇಳೆ‌ ಆಕ್ರೋಶಗೊಂದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಚಿತ್ರ ಎಂದರೆ ಕಾನೂನು ನೀತಿ ನಿಯಮಗಳನ್ನು ಗೌರವಿಸಬೇಕಾದವರೆ ಪ್ರತಿಭಟನೆ ಮಾಡಿದರೆ ಕಾನೂನಿಗೆ ಗೌರವ ಕೊಡೊದಾದರೂ ಯಾರು ?  ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಕ್ಕೆ, ಆರೊಪ ಮಾಡಿಕೊಳ್ಳಲಿ ಮುಖ್ಯ ಮಂತ್ರಿ ಅವರ ಆಗಮನ ಹಿನ್ನೆಲೆಯಲ್ಲಿ ಡಿವೈಡರ್ ಗೆ ಕಟ್ಟಲಾಗಿದ್ದ ಪ್ಲೆಕ್ಸ್ ತೆರವು ಮಾಡಿದ್ದೇವೆ. ಜೊತೆಗೆ ಆಸುಪಾಸು ಕಟ್ಟಲಾಗಿದ್ದ ಪ್ಲೆಕ್ಸ್ ಗೆ  ಹಣ ಪಾವತಿಸಿಕೊಂಡು ಅನುಮತಿ ಕೂಡ ನೀಡಿದ್ದೇವೆ. ಕಾನೂನು ಮುಂದೆ ಯಾರು ದೊಡ್ಡವರಲ್ಲ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.