ಹೈಟೆಕ್ ವೇಶ್ಯಾವಾಟಿಕೆ ದಂಧೆ; 44 ಯುವತಿಯರ ರಕ್ಷಣೆ

ಬೆಂಗಳೂರು: ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬೆಂಗಳೂರಿನ ಮಸಾಜ್ ಪಾರ್ಲರ್ ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಸ್ಪಾ ಮಾಲೀಕ ಸೇರಿ ಒಟ್ಟು 44 ಮಹಿಳೆಯರು, 34 ಗಿರಾಕಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಸಿಬಿ ಪೊಲೀಸರ ತಂಡ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ಇರುವ ನಿರ್ವಾನ್ ಇಂಟರ್ ನ್ಯಾಷನಲ್ ಸ್ಪಾದ ಮೊದಲ ಮಹಡಿ ಹಾಗೂ 6ನೇ ಮಹಡಿಯಲ್ಲಿ ಪರಿಶೀಲನೆ ನಡೆಸಿ, ಹೊರ ರಾಜ್ಯ, ಹೊರ ದೇಶದಿಂದ ಯುವತಿಯರು, ಮಹಿಳೆಯರನ್ನು ಕರೆಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮಾಲೀಕ ಅನಿಲ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹೊರ ರಾಜ್ಯದಿಂದ ಬಂದು ಅನಿಲ್ ಸ್ಪಾ ನಡೆಸುತ್ತಿದ್ದು,ಆತನಿ ಸೇರಿದ 3.5 ಕೋಟಿ ರೂ. ಮೌಲ್ಯದ ಬೆನ್ಜ್ ಕಾರನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.